Karnataka NewsLatest

ಗುಣಗಳ ಗಣಿ ಗಣಪತಿ

ಗುಣಗಳ ಗಣಿ ಗಣಪತಿ

 

ಮಂಗಳಮೂರ್ತಿ ಗಣೇಶನನ್ನು ವಿಶೇಷವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಗಣಪತಿ ಎಂದರೆ, ಗಣಗಳ-ಸಮೂಹಗಳ ಅಧಿಪತಿ, ವಿಶ್ವದ ಎಲ್ಲ ಮಾನವ ಸಮಾಜಕ್ಕೆ ಒಡೆಯ.

ಸರ್ವಗುಣಗಳಧಾರಿ, ಸರ್ವವಿದ್ಯೆಗಳಲ್ಲಿ ಪಾರಂಗತನು, ಅವನಿಗೆ ಏಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ದು:ಖಹರ್ತ, ಸುಖಕರ್ತ, ಲಂಬೊದರ, ವಿನಾಯಕ, ಗಜಮುಖ, ಮೂಷಕವಾಹನ, ಮೋದಕಪ್ರೀಯ ಮುಂತಾದ ಅನೇಕ ಹೆಸರುಗಳಿವೆ.

ಸರ್ವರ ಮಂಗಳಕಾರಿ ಆಗಿರುವುದರಿಂದ ಅವನಿಗೆ ಮಂಗಳಮೂರ್ತಿ ಎಂದು, ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರ ಎಂದು, ದು:ಖವನ್ನು ಹರಿಸಿ ಸುಖವನ್ನು ಕೊಡುವುದರಿಂದ, ದು:ಖಹರ್ತ-ಸುಖಕರ್ತ ವೆಂದು ಅವನ ಮಹಿಮೆ ಇದೆ.

ಲಂಬೋದರವೆಂದರೆ ವಿಶಾಲ ಹೊಟ್ಟೆ ಅರ್ಥಾತ್ ಎಲ್ಲರ ಅಪರಾಧ ಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮೆ ಮಾಡುವವನು ಎಂದು. ಹೀಗೆ ಅವನ ಅನೇಕ ನಾಮಗಳು ಗುಣಗಳವಾಚಕವಾಗಿವೆ. ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ.

ಕಂಪ್ಯೂಟರನಲ್ಲಿ ಹೇಗೆ ಮೌಸ್‌ನಿಂದ ಯಾವುದೆ ಕೆಲಸ ಮಾಡಬಹುದೋ ಹಾಗೆಯೇ ಇಲಿಯ ಮೇಲೆ ಸವಾರಿಯು, ಮನಸ್ಸು ಬುದ್ಧಿಯ ಮೇಲೆ ನಿಯಂತ್ರಣ ಮಾಡುವ ಸಂಕೇತವಾಗಿದೆ. ಗಜಮುಖ ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಮೋದಕಪ್ರಿಯವೆಂದರೆ ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ.

32 ಅವತಾರ

ಗಣಪತಿಯ ಬಗೆಬಗೆಯ ಅವತಾರಗಳು ಇವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ೩೨ ಬಗೆಯ ಅವತಾರಗಳಲ್ಲಿ ಗಣಪತಿ ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನು ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿದೆ.
೧. ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯ ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.
೨. ತರುಣ ಗಣಪತಿ ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು ೮ ಕೈಗಳನ್ನು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.
೩. ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಇರುತ್ತದೆ.
೪. ವೀರ ಗಣಪತಿಯ ಅವತಾರದಲ್ಲಿ ಗಣಪತಿಯ ಆಯುಧಗಳನ್ನು ೧೬ ಕೈಗಳಲ್ಲಿ ಇರುತ್ತದೆ. ಗಣಪತಿಯ ಈ ’ವೀರ’ ಅವತಾರವು ಯುದ್ಧಕ್ಕೆ ಸನ್ನದ್ದವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.
೫. ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹೀಡಿದು ಕುಳಿತಿರುತ್ತಾಳೆ. ಈತನ ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.
೬. ದ್ವಿಜ ಗಣಪತಿ ದ್ವಿಜ ಎಂದರೆ ಎರಡು ಬಾರಿ ಜನಿಸಿದವನು ಎಂದರ್ದ. ಗಣೇಶನು ನಿಜವಾಗಿಯು ಎರಡು ಬಾರಿ ಜನಿಸಿದವನು. ಮೊದಲು ಜನಿಸಿದ ನುಂತರ ಕೊಲ್ಲಲ್ಪಟ್ಟು ಆ ಮೇಲೆ ಪುನ: ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ ೪ ತಲೆಗಳು ಇವೆ.
೭. ಸಿದ್ಧಿ ಗಣಪತಿಯನ್ನು ಯಶಸ್ಸು ಮತ್ತು ಸಂಪತ್ತಿನ ಸಲವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.
೮. ಉಚ್ಚಿಷ್ಟ ಗಣಪತಿ ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ನದ ಈ ಗಣಪತಿಯು ೬ ಕೈಗಳು ಹೊಂದಿದ್ದು ಕೈಯಲ್ಲಿ ವೀಣೆಯಂತಹ ಸಂಗಿತ ವಾದ್ಯಗಳನ್ನು ಹಿಡಿದಿರುತ್ತಾನೆ.
೯. ವಿಘ್ನ ಗಣಪತಿ ಗಣಪತಿಯನ್ನು ವಿಘ್ನೇಶ್ವರ ವಿಘ್ನನಾಶಕ ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತದೆ.
೧೦. ಕ್ಷಿಪ್ರ ಗಣಪತಿ ಕೆಂಪು ವರ್ಣದ ಈ ಗಣಪತಿಯ ಹೆಸರೇ ಸುಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.
೧೧. ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ್ದಾನೆ. ಈತನಿಗೆ ೫ ತಲೆಗಳು ಇದ್ದು ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಎರಿರುವ ಅವತಾರ ಇದಾಗಿದೆ.
೧೨. ಲಕ್ಷ್ಮೀ ಗಣಪತಿ ಯನ್ನು ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.
೧೩. ಮಹಾಗಣಪತಿ ಮಹಾ ಎಂಬ ಮಾತೇ ಶ್ರೇಷ್ಟ ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.
೧೪. ವಿಜಯ ಗಣಪತಿ ಹೇಸರೇ ಸೂಚಿಸುವಂತೆ ವಿಜಯದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು ಮೂಷಕ ವಾಹನನಾಗಿ ಕಾಣಿಸುತ್ತಾನೆ.
೧೫. ನೃತ್ಯ ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯು ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾನೆ.
೧೬. ಊರ್ಧ್ವ ಗಣಪತಿ ಎಂದರೆ ಉದ್ದವಾಗಿ ಇರುವ ಗಣಪತಿ ಎಂದರ್ಧ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಿಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲ್ತಿ, ಭತ್ತ, ನೈದಿಲೆ, ಕಬ್ಬನ ಜಲ್ಲ್ಲೆಗಳನ್ನು ನಾವು ಕಾಣಬಹುದು.
೧೭. ಏಕಾಕ್ಷರ ಗಣಪತಿಯು ಹೆಸರೆ ಸೂಚಿಸುವಂತೆ ’ಒಂದೆ ಅಕ್ಷರದ ಗಣಪತಿಯಾಗಿರುತ್ತಾನೆ ಈತನು ಕೆಂಪು ಬಣ್ಣದಲ್ಲಿದ್ದು ಮೂಷಕ ವಾಹನನಾಗಿ ನಮಗೆ ಕಾಣಿಸುತ್ತಾನೆ.
೧೮. ವರದ ಗಣಪತಿ ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ ಮೂರನೆ ಕಣ್ಣು ಇದೆ, ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.
೧೯. ತ್ರಯಾಕ್ಷರ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು ಕೈಯಲ್ಲಿ ತನ್ನು ಪ್ರೀತಿಯ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.
೨೦. ಕ್ಷಿಪ್ರಪ್ರಸಾದ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸಿವನೆಂದು ಭಾವಿಸಲಾಗಿದೆ.
೨೧. ಹರಿದ್ರ ಗಣಪತಿಯು ಸಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ರಾಜ ಠಿವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.
೨೨. ಏಕದಂತ ಗಣಪತಿಯು ಒಂದೆ ಒಂದು ದಂತವನ್ನು ಹೋಂದಿದ್ದು ನೀಲಿಬಣ್ಣದಿಂದ ಕೂಡಿರುತ್ತಾನೆ.
೨೩. ಸೃಷ್ಟಿ ಗಣಪತಿಯ ಈ ಸಣ್ಣರೂಪವು ಮೂಷಕ ವಾಹನವಾಗಿದ್ದು ಒಳ್ಳೆಯ ಮೂಡ್ ನಲ್ಲಿ ಕಾಣಿಸಿಕೊಳ್ಳುತ್ತಾನೆ.
೨೪. ಉದ್ದಂಡ ಗಣಪತಿಯು ವಿಶ್ವದಲ್ಲಿ ಧರ್ಮವನ್ನು ಪರಿಪಾಲಿಸುತ್ತಾನೆ. ಈ ಗಣಪತಿಯ ೧೦ ಕೈಗಳನ್ನು ಹೊಂದಿದ್ದು ವಿಶ್ವದಲ್ಲಿರುವ ಎಲ್ಲಾ ೧೦ ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.
೨೫. ಖುಣಮೋಚನ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.
೨೬. ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.
೨೭. ದ್ವಿಮುಖ ಗಣಪತಿಯ ಹೆಸರೇ ಸೂಚಿಸುವಂತೆ ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.
೨೮. ತ್ರಿಮಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು ಚಿನ್ನದ ಕಮಲದ ಹೂವಿನ ಮೇಲೆ ಆಸಿನನಾಗಿರುತ್ತಾನೆ.
೨೯. ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.
೩೦. ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.
೩೧. ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು ಈ ಅವತಾರದಲ್ಲಿ ಈತ ತನ್ನು ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.
೩೨. ಸಂಕಷ್ಟ ಹರ ಗಣಪತಿಯ ಈ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತಾನೆ.

ಅಷ್ಟವಿನಾಯಕ ಮಂದಿರಗಳು

ಗಣೇಶನ ಅಷ್ಟವಿನಾಯಕ ಮಂದಿರಗಳು ಸುಪ್ರಸಿದ್ಧವಾಗಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅಷ್ಟವಿನಾಯಕ ದರ್ಶನಯಾತ್ರೆ ಮಾಡುತ್ತಾರೆ. ಮುಖ್ಯವಾಗಿ ಇದರಲ್ಲಿ ಅನೇಕ ಸ್ಥಳಗಳು ಸ್ವಯಂಭು ಮತ್ತು ಜಾಗೃತವಾಗಿವೆ.

ಮೋರೆಗಾಂನಲ್ಲಿ ಮೇರೆಶ್ವರ, ಥೇಯುರದಲ್ಲಿ ಚಿಂತಾಮಣಿ, ಸಿದ್ಧಟೇಕದ ಸಿದ್ಧಿವಿನಾಯಕ, ರಾಂಜಣಗಾಂವದ ಮಹಾಗಣಪತಿ, ಓಝರನಲ್ಲಿ ವಿಘ್ನೇಶ್ವರ, ಲೆಣ್ಯಾದ್ರ್ರಿಯ ಗಿರಿಜಾತ್ಮಜ, ಮಹಾಡದ ವರದವಿನಾಯಕ, ಮತ್ತು ಪಾಲಿಯ ಬಲ್ಲಾಳೇಶ್ವರ. ಈ ರೀತಿ ಪುಣೆ ಜಿಲ್ಲಿಯಲ್ಲಿ ಏದು, ರೈಗಡ್ ಜಿಲ್ಲೆಯಲ್ಲಿ ಎರಡು ಮತ್ತು ಅಹಮದನಗರ ಜಿಲ್ಲೆಯಲ್ಲಿ ಒಂದು ತಿರ್ಥಸ್ಥಾನ ಇದೆ.

ಬದಲಾಗುತ್ತಿರುವ ಈ ವಿದ್ಯುನ್ಮಾನ ಯುಗದಲ್ಲಿ ಒಂದುಕಡೆ ಭಕ್ತಿಯಲ್ಲಿ ಭಾವನೆ ಜಾಸ್ತಿ ಅಗುತ್ತಿದ್ದೆ. ಗಣೇಶನ ರೂಪವು ಬದಲಾಗುತ್ತಿದೆ. ಅಶ್ಲೀಲ ಹಾಡುಗಳನ್ನು ಎಲ್ಲಡೆ ಕೆಳಿಬರುತ್ತಿದೆ. ಇದರಿಂದ ಧ್ವನಿಪ್ರದುಷಣ ಆಗುತ್ತದೆ. ಸಾಮರಸ್ಯ, ಏಕತೆ, ಸಂಘಟನೆಯ ಉದ್ದೇಶದಿಂದ ‘ಲೊಕಮಾನ್ಯ ತಿಲಕರು’ ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ಇಂದು ವಿಕ್ರಾಳ ರೂಪ ತಾಳಿದೆ.

ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು

ಗಣಪನ ಸ್ಥಾಪನೆ-ವಿರ್ಸಜನೆಯ ಸಮಯದಲ್ಲಿ ಅನೇಕ ಪ್ರಕಾರದ ಘರ್ಷಣೆ, ಗಲಾಟೆ, ಹಿಂಸೆಯು ನಡೆಯತ್ತಿದೆ. ಗಣಪತಿಯ ಮೂರ್ತಿಗಳು ಪ್ಲಾಸ್ಟರ ಆಫ ಪ್ಯಾರಿಸನಿಂದ ಮಾಡುತ್ತಾರೆ. ಅನೇಕ ರಾಸಾಯನಿಕ ಬಣ್ಣ ಮತ್ತು ಸಿಡಿಮದ್ದುಗಳಿಂದ ಪರಿಸರ ಹಾನಿಯಾಗುತ್ತದೆ. ಇದಕ್ಕೆ ವಿಚಾರವಂತರು, ಬುದ್ಧಿವಾದಿಗಳು, ಚಿಂತಕರು, ಎಲ್ಲರೂ ಸೇರಿದರೆ ಕಡಿವಾಣ ಹಾಕಬಹುದು.

ವಾಸ್ತವವಾಗಿ ಗಣಪತಿಯ ಹಬ್ಬವು ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು. ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಹಬ್ಬವನ್ನು ಅಲೌಕಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರ ಸತ್ಯಾಂಶವನ್ನು ನಿರಾಕಾರ ಪರಮಾತ್ಮನ ಜ್ಞಾನದ ಆಧಾರದಿಂದ ತಿಳಿಸಿ ಆಚರಣೆಯಲ್ಲಿ ತರುವುದಕ್ಕೆ ಅಲ್ಲಿ ಮಹತ್ವ ಕೊಡಲಾಗುತ್ತದೆ.
ಗಣೇಶನ ಮೂರ್ತಿಯು ಮಣ್ಣಿನಿಂದ ತಯಾರಿಸಿ ಬಣ್ಣವನ್ನು ಹಚ್ಚಿಸಿ, ಶೃಂಗಾರ ಮಾಡಿ ಪೂಜೆ ಮಾಡುವರು. ಕೆಲವು ದಿನಗಳ ನಂತರ ಗಣಪನ ವಿರ್ಸಜನೆ ಮಾಡುವರು. ಇದರ ನಿಜ ಅರ್ಥ ಮಾನವನ ವಿನಾಶಿ ಶರೀರವು ಪಂಚತತ್ವಗಳಿಂದ ತಯಾರಾಗಿದೆ.

ಬುದ್ಧಿಯ ಪ್ರಾಪ್ತಿ

ನಾವು ಆತ್ಮ, ಜಾತಿ ಇಲ್ಲದ ಜ್ಯೋತಿ ಎಂದು ತಿಳಿದು ದಿವ್ಯಗುಣಗಳ ಶೃಂಗಾರ ಮಾಡಿದಾಗ, ಪೂಜೆಗೆ ಯೋಗ್ಯರಾಗುವೆವು. ಗುಣಗಳ ಧಾರಣೆ ದೇಹಾಭಿಮಾನದ ಮೂಲವಾಗಿರುವ ಪಂಚವಿಕಾರಗಳ ತ್ಯಾಗದಿಂದ ಆಗುವದು. ಬ್ರಹ್ಮಚಾರಿ ವಿನಾಯಕನಿಗೆ ಎರಡು ಪತ್ನಿಯರು ಸಿದ್ಧಿ ಮತ್ತು ಬುದ್ಧಿ ಎಂದು. ಇದರ ಅರ್ಥ ಪ್ರವೃತ್ತಿ ಮಾರ್ಗದಲ್ಲಿ ಇದ್ದರೂ ನಾವು ಪವಿತ್ರತೆಯ ಬಲದಿಂದ ಸಿದ್ಧಿ ಮತ್ತು ಬುದ್ಧಿಯ ಪ್ರಾಪ್ತಿ ಮಾಡಿಕೊಳ್ಳಬಹುದು.
ಸದ್ಗುಣಗಳ ಮೂರ್ತಿ, ಗುಣಗಳ ಗಣಿ, ದಿವ್ಯ ಬುದ್ಧಿಯದಾತಾ, ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು, ಪ್ರಾರಂಭದಲ್ಲಿ ಗಣೇಶನ ಪೂಜೆ ಮಾಡುವ ವಾಡಿಕೆ ಇದೆ. ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ವಿಶೇಷತೆಗಳನ್ನು ಧಾರಣೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುವುದು.

ಅದಕ್ಕೆ ಆತ್ಮಜ್ಞಾನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ವ್ಯಕ್ತಿವಾಚಕ ಶಬ್ದ ಅಲ್ಲ ಅದು ಗುಣವಾಚಕ ಶಬ್ದವಾಗಿದೆ. ಅತ್ಮವು ಶರೀರ ಬಿಟ್ಟು ಹೋದ ಮೇಲೆ, ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ನಮ್ಮ ಜೀವನವು ಗಣಪತಿಯ ಹಾಗೆ ನಾಲ್ಕು ದಿನಗಳ ಬಾಳಾಗಿದೆ. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನ ಗುಣಗಳನ್ನು ಧಾರಣೆ ಮಾಡಿ, ನಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳೊಬೇಕು.
ವಕ್ರ ತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ!
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ!!

 -ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button