ಕಲಬೆರಕೆ ಹಾಲು ತಯಾರಿಕೆ ಕೇಂದ್ರದ ಮೇಲೆ ದಾಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಗೋಕಾಕ ತಾಲೂಕಿನ ತುಕ್ಕಾನಟ್ಟಿಯಲ್ಲಿ ಕಲಬೆರಕೆ ಹಾಲು ತಯಾರಿ ಕೇಂದ್ರ ಪತ್ತೆಯಾಗಿದೆ.
ತುಕ್ಕಾನಟ್ಟಿ ಗ್ರಾಮದ ಕರಿಸಿದ್ದೇಶ್ವರ ಹಾಲು ಉತ್ಪಾದಕರ ಸಂಘ ಹೆಸರಿನಲ್ಲಿ ಫೌಡರ್ ಹಾಗೂ ಎಣ್ಣೆ ಮಿಶ್ರಣ ಮಾಡಿ ಕಲಬೆರಕೆ ಹಾಲು ತಯಾರಿಸಲಾಗುತ್ತಿತ್ತು.
26 ವರ್ಷದ ಸತೀಶ್ ವಿಠ್ಠಲ ದುರದುಂಡಿ ಆರೋಪಿ. ಈತ ಸ್ಕಿಮ್ಡ್ ಫೌಡರ್ ಬಳಸಿ ಕಲಬೆರಕೆ ಹಾಲು ತಯಾರಿಸುತ್ತಿದ್ದರು. 23 ಬ್ಯಾಗ್ ಸ್ಕಿಮ್ಡ್ ಫೌಡರ್ ಹಾಗೂ 6 ಎಣ್ಣೆ ಕ್ಯಾನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಥಳೀಯರು ನೀಡಿದ ದೂರನ್ನು ಆಧರಿಸಿ ಈ ದಾಳಿ ನಡೆಸಲಾಗಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನವೇ ಅವರ ಕ್ಷೇತ್ರದಲ್ಲಿ ಕಲಬೆರಕೆ ಹಾಲು ಉತ್ಪಾದಕರ ಕೇಂದ್ರದ ಮೇಲೆ ದಾಳಿಯಾಗಿದೆ.
ಇಂತಹ ಕೇಂದ್ರಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಬಹಳಷ್ಟಿವೆ. ಕಳೆದ ವರ್ಷ ರಾಯಬಾಗದಲ್ಲೂ ಪತ್ತೆಯಾಗಿತ್ತು. ಬಾಲಚಂದ್ರ ಜಾರಕಿಹೊಳಿ ಇಂತವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಹಾಗಾದಲ್ಲಿ ಕೆಎಂಎಫ್ ನ್ನು ಲಾಭದಾಯಕವಾಗಿ ಮುನ್ನಡೆಸಲು ಸಹಾಯಕವಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ