Latest

ಜಿಐಟಿಯಲ್ಲಿ 21 ರಿಂದ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

 

 

 

 

    ಸುಮಾರು ೧೨೦ ಸಂಶೋಧನಾ ಲೇಖನಗಳು ಪ್ರಸ್ತುತಗೊಳ್ಳಲಿವೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು ಇದೆ ಡಿಸೆಂಬರ್ 21ರಿಂದ 23  ರವರೆಗೆ  “ಕಂಪ್ಯೂಟೇಶನಲ್ ಟೆಕ್ ನಿಕ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಸಿಸ್ಟಮ್ಸ್ (ಸಿಟಿಎಂಎಸ್ -೨೦೧೮) ಎಂಬ ವಿಷಯದ ಮೇಲೆ ಪ್ರಥಮ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಸೈದ್ಧಾಂತಿಕ ಸಂಶೋಧನೆ ಮತ್ತು ಪ್ರಾಯೋಗಿಕ ಕ್ಷೇತ್ರದ ಅಭಿವೃದ್ಧಿಯಲ್ಲಿನ ಬೆಳವಣಿಗೆಗಳ ಮಾಹಿತಿ ವಿನಿಮಯ ಹಾಗೂ ಇವತ್ತಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳೆವಣಿಗೆಗೆಳ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರಾಂತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆಳನ್ನು ಪ್ರಕಟಿಸಿ ಪ್ರೋತ್ಸಾಹಿಸುವ ಸಂಸ್ಥೆ ಐಇಇಇ ತಾಂತ್ರಿಕವಾಗಿ ಸಹಯೋಗ ನೀಡುತ್ತಿದೆ.

ಈ ಸಮ್ಮೇಳನದಲ್ಲಿ ಭಾರತ ಸೇರಿದಂತೆ ವಿದೇಶದಿಂದ ಅಂತರಾಷ್ಟ್ರೀಯ ಖ್ಯಾತಿಯ ಪ್ರಮುಖ ಶಿಕ್ಷಣ ತಜ್ಞರು, ವಿಜ್ಞಾನಿಗಳು ಮತ್ತು  ಸಂಶೋಧಕರು ಪಾಲ್ಗೊಳಲಿದ್ದಾರೆ. ಇವರು ಇಲೆಕ್ಟ್ರಾನ-ಮೆಕ್ಯಾನಿಕಲ್ ಸಿಸ್ಟಮ್ಸ್ ಮತ್ತು ಕಂಪ್ಯೂಟೇಶನಲ್ ಇಂಟೆಲಿಜೆನ್ಸ್ ನ ಕ್ಷೇತ್ರಗಳಲ್ಲಿನ ತಮ್ಮ ಸಂಶೋಧನಾ ಅನುಭವಗಳನ್ನು ಮತ್ತು ತಮ್ಮ ಸಂಶೋಧನಾ ಕಾರ್ಯಗಳನ್ನು ವಿನಿಮಯ ಮಾಡಿಕೊಳ್ಳುವರು.

ಈ ಸಮ್ಮೇಳನಕ್ಕೆ ರಾಷ್ಟ್ರದ ಎಲ್ಲ ಕಡೆಗಳಿಂದ ಸುಮಾರು 400ಕ್ಕೂ ಅಧಿಕ ಸಂಶೋಧನಾ ಲೇಖನಗಳು ಬಂದಿದ್ದು ವಿಮರ್ಶೆಗಾಗಿ ಸಲ್ಲಿಸಲಾಗಿತ್ತು. ನಂತರ ವಿಶೇಷ ಶಿಕ್ಷಣತಜ್ಞರು ಮತ್ತು ಸಂಶೋಧಕರನ್ನು ಒಳಗೊಂಡಿರುವ ವಿಮರ್ಶೆ ಕ್ರಿಯೆಯು ಸಂಪೂರ್ಣ ಪರಿಶೀಲನೆಯ ನಂತರ 120 ಶ್ರೇಷ್ಠ ಲೇಖನಗಳನ್ನು ಪ್ರಸ್ತುತ ಪಡಿಸಲು ಆಯ್ಕೆ ಮಾಡಲಾಗಿದೆ.

ಇದರ ಜೊತೆಗೆ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕರಿಂದ ಮೂರು ಪ್ರಮುಖ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದಾರೆ. ಪೋರ್ಚುಗಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಅಲಾವೊರೊ ರೊಚಾ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಅಮೇರಿಕಾದ ಇಲಿನಾಯ್ಸ್ ಚಿಕ್ಯಾಗೋದಲ್ಲಿರುವ ತಾಂತ್ರಿಕ ಮಹಾವಿದ್ಯಾಲಯದ ಡಾ. ಸುರೇಶ್ ಬೊರಕರ ಮತ್ತು ಬಲ್ಗೇರಿಯಾದ ಸೋಫಿಯಾ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ. ವಿವೇಕ್ ಎಸ್. ದೇಶಪಾಂಡೆ ಅವರು ಸಹ ಪ್ರಮುಖ ಉಪನ್ಯಾಸಗಳನ್ನು ನೀಡಲಿದ್ದಾರೆ. ಜೊತೆಗೆ ಮೋರೋ ದಿನಗಳು ನಡೆಯಲಿರುವ ಅನೇಕ ತಾಂತ್ರಿಕ ವಿಚಾರ ಸಂಕಿರಣಗಳಲ್ಲಿ ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಶಿಕ್ಷಣತಜ್ಞರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಈ ಸಮ್ಮೇಳನದಲ್ಲಿ ಆಯ್ಕೆಯಾದ ಎಲ್ಲಾ ಲೇಖನಗಳನ್ನು ಐಇಇಇ ಎಕ್ಷ್ ಫ್ಲೋರ್ ಡಿಜಿಟಲ್ ಲೈಬ್ರರಿಯಲ್ಲಿ ಪ್ರಕಟಿಸಲಾಗುವುದು. ಜೊತೆಗೆ ಇಲೆಕ್ಟ್ರಾನ -ಮೆಕ್ಯಾನಿಕಲ್ ಸಿಸ್ಟಮ್ಗಳಲ್ಲಿ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನದೊಂದಿಗೆ ಉದ್ಯಮ ಮತ್ತು ಅಕಾಡೆಮಿ ಜೊತೆಗಿನ ಸಂವಹನವು ಸಮ್ಮೇಳನದ ಇನ್ನೊಂದು ಬಹುಮುಖ್ಯ ಭಾಗವಾಗಿದೆ. ಇದರಲ್ಲಿ ಸುಮಾರು 500ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾವಹಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button