Kannada NewsKarnataka News

ಪರಿಹಾರ ಧನದ ಚೆಕ್‌ಗಳನ್ನು ವಿತರಿಸಿದ ಶಾಸಕ ಅನಿಲ ಬೆನೆಕೆ

ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: – ಶಾಸಕ ಅನಿಲ ಬೆನಕೆ ಬೆಳಗಾವಿಯ ಹನುಮಾನ ನಗರ ವಾರ್ಡ ನಂ. ೩೧ ಮತ್ತು ೩೨ ರ ಕುಡಿಯುವ ನೀರಿನ ಹೊಸ ಪೈಪ್ ಲೈನ್ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬೆಳಗಾವಿಯ ಹನುಮಾನ ನಗರದ ೩೧ ಮತ್ತು ೩೨ ನೇ ವಾರ್ಡಗಳಲ್ಲಿನ ಸಹ್ಯಾದ್ರಿ ನಗರ, ಹನುಮಾನ ನಗರ, ಪ್ರೆಸ್ ಕಾಲೊನಿ, ಜಯನಗರ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಹೊಗಲಾಡಿಸುವಂತೆ ಮನವಿ ಮಾಡಿದ್ದರು.

ಸಮಸ್ಯೆಯನ್ನು ಅರಿತು ಸ್ಥಳಕ್ಕೆ ಬೇಟಿ ನೀಡಿ ಇಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಹೊಗಲಾಡಿಸಲು ಈ ಹಿಂದೆ ಇದ್ದ ಹಳೆಯ ನೀರಿನ ಪೈಪ್‌ಲೈನನ್ನು ತೆಗೆದು ಹಾಕಿ ಹೊಸ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ನೀರಿನ ತೊಂದರೆ ಅನುಭವಿಸುತ್ತಿದ್ದ ಸಹ್ಯಾದ್ರಿ ನಗರ, ಹನುಮಾನ ನಗರ, ಪ್ರೆಸ್ ಕಾಲೊನಿ, ಜಯನಗರ ನಿವಾಸಿಗಳಿಗೆ ಇನ್ನು ಮುಂದೆ ನೀರಿನ ಅಭಾವ ಕಡಿಮೆಯಾಗಲಿದೆ ಎಂದು ಶಾಸಕರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹನುಮಾನ ನಗರದ ಬೆಳಗಾವಿ ನಾಗರಿಕ ವೇದಿಕೆಯ ಕಾರ್ಯಾಧ್ಯಕ್ಷರಾದ ಡಿ. ಎನ್. ಮಿಸಾಳೆ ರವರು ಶಾಸಕ ಅನಿಲ ಬೆನಕೆರವರು ಹನುಮಾನ ನಗರದ ನೀರಿನ ಸಮಸ್ಯೆಯನ್ನು ನಿವಾರಣೆಗಾಗಿ ಸಂಸದದರು ಹಾಗೂ ದಂಡು ಮಂಡಳಿಯ ಜೊತೆ ಮಾತನಾಡಿ ಜನತೆಯ ಕಷ್ಠ ನಿವಾರಿಸುವಲ್ಲಿ ಶ್ರಮಿಸಿ ನೀರಿನ ಅನುಕೂಲ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಡಿ.ಎನ್. ಮಿಸಾಳೆ, ಪ್ರೋ. ಎನ್.ಎನ್. ಮೂಲಿಮನಿ, ಎಸ್. ಜೆ. ಏಳುಕೋಟಿ, ಶ್ರೀ ಕಾಳೆ ಹಾಗೂ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪರಿಹಾರ ಧನದ ಚೆಕ್‌ಗಳನ್ನು ವಿತರಿಸಿದ ಶಾಸಕ ಅನಿಲ ಬೆನೆಕೆ

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ನಗರದ ಶಾಸಕರ ಕಾರ್ಯಾಲಯದಲ್ಲಿ ಇತ್ತಿಚೆಗೆ ನಗರದಲ್ಲಿ ಉಂಟಾದ ಅತಿವೃಷ್ಠಿಯಿಂದ ಬಳಲಿದ ನೆರೆ ಸಂತ್ರಸ್ಥರಿಗೆ ೩೮೦೦ ರೂ.ಗಳ ಚೆಕ್‌ಗಳನ್ನು ತಹಶೀಲ್ದಾರ ಮಂಜುಳಾ ನಾಯಕರವರೊಂದಿಗೆ ವಿತರಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ನಗರದಲ್ಲಿ ನೂರಾರು ಮನೆಗಳು, ಗೃಹೋಪಯೋಗಿ ವಸ್ತುಗಳು, ರಸ್ತೆಗಳು ಹಾಗೂ ಇನ್ನಿತರೆ ಆಸ್ತಿ ಪಾಸ್ತಿ ಹಾನಿಯಾಗಿದ್ದು ಮನೆಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರದಿಂದ ಬಿಡುಗಡೆಯಾದ ೩೮೦೦ ರೂ.ಗಳ ಚೆಕ್‌ಗಳನ್ನು ಗಂಜಿ ಕೇಂದ್ರಗಳಲ್ಲಿ (ಕಾಳಜಿ ಕೇಂದ್ರಗಳು) ವಾಸಿಸುತ್ತಿದ್ದ ೬೭ ನೆರೆ ಸಂತ್ರಸ್ಥರಿಗೆ ಶಾಸಕರು ಹಾಗೂ ತಹಶೀಲ್ದಾರ ಮಂಜುಳಾ ನಾಯಕ ಇವರು ವಿತರಿಸಿದರು ಹಾಗೂ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button