ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ
ಪ್ರಗತಿವಾಹಿನಿ ಮೂಡಲಗಿ: ಭದ್ರ ಭವಿಷ್ಯತ್ತಿನಲ್ಲಿ ದೇಶದ ಪ್ರಜಾಪ್ರಭುತ್ವ ಸುಸ್ಥಿರವಾಗುವ ನಿಟ್ಟಿನಲ್ಲಿ ಎಲ್ಲರನ್ನೂ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಆದ್ಯ ಕರ್ತವ್ಯವಾಗಿದೆ. ಅರ್ಹ ಮತದಾರರಿಗೆ ಅವಕಾಶ ನೀಡಿದಾಗ ಪ್ರಜಾಪ್ರಭುತ್ವ ಗಟ್ಟಿಯಾಗಿ ದೇಶದ ಉನ್ನತಿಗೆ ಸಹಾಯಕವಾಗುವುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಗೋಕಾಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ರವಿವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಜರುಗಿದ ಚುನಾವಣೆ ಆಯೋಗ, ತಾಲೂಕಾಡಳಿತ, ತಾಲೂಕಾ ಸ್ವೀಪ್ ಸಮಿತಿವತಿಯಿಂದ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶಾದ್ಯಂತ ಸೆ. 1 ರಿಂದ ಅ. 15 ರವರೆಗೆ ಇರುವ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದಲ್ಲಿ ಎಲ್ಲರೂ ಸಹಕರಿಸಬೇಕು.
ಮತದಾನದ ದಿನಾ ಅನಗತ್ಯವಾಗಿ ಮತದಾರ ಪಟ್ಟಿಯ ದೋಷಗಳು ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂಚಿತವಾಗಿ ಕ್ರಮವಹಿಸಲು ಸಾಧ್ಯವಾಗುವುದು. ಮತದಾರರ ಪಟ್ಟಿಯ ಪರಿಶೀಲನೆ ದೃಢೀಕರಣ, ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ತಿದ್ದುಪಡಿಗೆ ಅವಕಾಶವಿದ್ದು, ಅವಶ್ಯಕ ದಾಖಲೆಗಳೊಂದಿಗೆ ಶೇಕಡಾ 100 ರಷ್ಟು ಮತದಾರರ ವಿವರಗಳನ್ನು ಸರಿಪಡಿಸಲು ಬಿ.ಎಲ್.ಒ ಗಳು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಶಿಕ್ಷಕರ ಬೇಕು ಬೇಡಿಕೆಗಳನ್ನು ಸರಕಾರಕ್ಕೆ ತಿಳಿಸಲಾಗುವದು
ಮೂಡಲಗಿ ತಹಶೀಲ್ದಾರ ಮುರಳಿಧರ ತಳ್ಳಿಕೇರಿ ಮಾತನಾಡಿ, ಬಿ.ಎಲ್.ಒ ಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಅಗತ್ಯ ಸಹಾಯ ನೀಡಲಾಗುವುದು. ಪ್ರತಿ ಕುಟುಂಭದ ಪ್ರತಿಯೊಬ್ಬ ಸದಸ್ಯನು ಅರ್ಹ ಮತದಾರನು ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯನಿರ್ವಹಿಸಬೇಕು. ತಾಲೂಕಾಡಳಿತದಿಂದ ಮತದಾರ ಪಟ್ಟಿಯ ಪರಿಶೀಲನೆಯಲ್ಲಿ ಸಹಾಯ ನೀಡುವುದಾಗಿ ಹೇಳಿದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸಾಮಾನ್ಯವಾಗಿ ರಾಷ್ಟ್ರೀಯ ಕಾರ್ಯವಾದ ಮತದಾರ ಪಟ್ಟಿ ಪರಿಶೀಲನಾ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕ ಸಮುದಾಯ ಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಶಿಕ್ಷಕರ ಬೇಕು ಬೇಡಿಕೆಗಳನ್ನು ಸರಕಾರಕ್ಕೆ ತಿಳಿಸಲಾಗುವದು. ತಮಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲು ಅಗತ್ಯ ಕ್ರಮಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದೆಂದು ಹೇಳಿದರು.
ಶಿಕ್ಷಕ ಸಂಘಟನೆಯ ಬಿ.ಆರ್ ತರಕಾರ, ಆರ್ ಎಮ್ ಮಹಾಲಿಂಗಪೂರ ಮಾತನಾಡಿ, ಪತದಾರ ಪಟ್ಟಿ ಪರಿಶೀಲನೆ ಹಾಗೂ ಬಿ.ಎಲ್.ಒ ಕಾರ್ಯನಿರ್ವಹನೆ ಸಂದರ್ಭದಲ್ಲಿ ಆಗುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟರು.
ನಗರದ ಲಕ್ಷ್ಮೀನಗರದ ಜನವತಿ ಪ್ರದೇಶಗಳಿಗೆ ತೇರಳಿ ಅರ್ಹ ಮತದಾರರು ತಮ್ಮ ಹೆಸರು ಸೇರ್ಪಡೆ, ಮಾರ್ಪಾಡುಗಳನ್ನು ಮಾಡುವಂತೆ ಸ್ವೀಪ್ ಸಮಿತಿಯಿಂದ ಜಾಗೃತಿ ಜಾಥಾ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ಧೇಶಕ ಎಸ್.ಎಚ್ ದೇಸಾಯಿ, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಚಂದ್ರಶೇಖರ ಪಾಟೀಲ, ಶಿರಸ್ತೆದಾರ ಶಿವಾನಂದ ಬಬಲಿ, ಪ್ರಧಾನ ಗುರುಗಳಾದ ರಾಜೇಂದ್ರ ಕುಲಕರ್ಣಿ, ಶಿವಾನಂದ ಸೋಮವ್ವಗೋಳ,ಭೀಮಪ್ಪ ಹುಲ್ಯಾಳ, ಕೆ.ಎಮ್ ವಾಣಿ, ಮಂಜುನಾಥ ಎಮ್, ಶಿಕ್ಷಕ ಸಂಘಟನೆಯ ಕೆ.ಎಲ್.ಮೀಶಿ, ಎಸ್.ಎಮ್ ದಬಾಡಿ, ಎಸ್.ಎಮ್ ಮಂಗಿ, ಆರ್.ಎನ್ ಬಟಕುರ್ಕಿ, ಸುರೇಶ ಕೋಪರ್ಡೆ, ಕೆ.ಜೆ ಜೋಶಿ, ಜಿ.ಬಿ ನಾಯಿಕ, ಬಿ.ಎ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ