ಕೆಎಲ್ಎಸ್ ಜಿಐಟಿಯಲ್ಲಿ 24 ಗಂಟೆಗಳ ಹ್ಯಾಕಥಾನ್ ಸ್ಫರ್ಧೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಬೆಳಗಾವಿಯ ಸಹಯೋಗದೊಂದಿಗೆ “ ಹ್ಯಾಕ್ ಟು ಫ್ಯೂಟ್ಯೂರ್-2024” ಹ್ಯಾಕಥಾನ್ ಸ್ಪರ್ಧೆ ಆಯೋಜಿಸಿತ್ತು.
24 ಗಂಟೆಗಳ ಬೆಳಗಾವಿ ವಲಯ ಮಟ್ಟದ ಹ್ಯಾಕಥಾನ್ ಅನ್ನು 4 ನೇ ಜೂನ್ 2024 ರಂದು ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. 24 ಗಂಟೆಗಳ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆಯಲ್ಲಿ ಅರ್ಹ 25 ತಂಡಗಳು ಭಾಗವಹಿಸಿದ್ದವು.
ಮುಖ್ಯ ಅತಿಥಿಗಳಾಗಿ ನಿವೃತ್ತ ಪಿಡಬ್ಲ್ಯೂಡಿ ಮುಖ್ಯ ಎಂಜಿನಿಯರ್ ಎಸ್.ಎಸ್.ಖನಗಾವಿ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಹೊಸ ಆಲೋಚನೆಗಳಿಗೆ ಈ ಸ್ಪರ್ಧೆ ಸ್ಪೂರ್ತಿಯಾಗಲಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕವಾಗಿ ಯೋಚಿಸಲು ಮತ್ತು ನೈಜ-ಪ್ರಪಂಚದ ಸವಾಲುಗಳಿಗೆ ಪರಿಹಾರಗಳನ್ನು ರೂಪಿಸಲು ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.
ಕೆಎಲ್ಎಸ್ ಜಿಐಟಿ ಗವರ್ನಿಂಗ್ ಕೌನ್ಸಿಲ್ , ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ್ ಅವರು ಯುವ ಮನಸ್ಸುಗಳಿಗೆ ತಮ್ಮ ಸೃಜನಶೀಲತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವಲ್ಲಿ ಹ್ಯಾಕ್ ಟು ಫ್ಯೂಚರ್ 24 ನಂತಹ ಕಾರ್ಯಕ್ರಮಗಳ ಮಹತ್ವವನ್ನು ತಿಳಿಸಿದರು.
ಸಿಎಸ್ಇ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವ್ ಎಸ್.ಸಣ್ಣಕ್ಕಿ ಅವರು ಭಾಗವಹಿಸಿದ ಎಲ್ಲರಿಗೂ ಮತ್ತು ಗಣ್ಯರಿಗೆ ಆತ್ಮೀಯ ಸ್ವಾಗತವನ್ನು ನೀಡಿದರು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುವಲ್ಲಿ ಹ್ಯಾಕಥಾನ್ಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ಪ್ರೊ.ಸೀನಾ ಕಲಘಟಗಿ, ಪ್ರೊ.ವೀಣಾ ಕಂಗ್ರಾಳಕರ, ಡಾ.ಶಾರದ ಕೋರಿ, ಪ್ರೊ.ಸಾಗರ ಪೂಜಾರ ಕಾರ್ಯಕ್ರಮ ಸಂಯೋಜಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ