Kannada NewsKarnataka NewsNational

*ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಮೂವರು ಪೊಲೀಸರ ಅಮಾನತು*

ಪ್ರಗತಿವಾಹಿನಿ ಸುದ್ದಿ: ರಾಮನಗರದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನಿಸಿ, ಅದರಲ್ಲಿ ಓರ್ವ ಸಾವನ್ನಪ್ಪಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಕಾರಣ  ಕೆ.ಆರ್. ನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಅಮಾನತು ಗೊಳಿಸಲಾಗಿದೆ.‌ 

ಬಾಲಕಿಗೆ ಕಿರುಕುಳು ನೀಡಿ ಆಕೆಯ ಕುಟುಂಬಸ್ಥರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿ ಲೋಕೇಶ್ ನನ್ನು ಬಂಧಿಸಿಸಲಾಗಿದೆ. ಬಂಧಿತ ಆರೋಪಿ ಚೀರನಹಳ್ಳಿಯ ಲೋಕೇಶ್ ಪತ್ನಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಲೋಕೇಶ್‌ಗೆ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮೇಲೆ ಕಣ್ಣಾಕಿದ್ದಾನೆ. ಆಕೆಯ ಜೊತೆ ಸಲುಗೆ ಬೆಳೆಸಿ ಅಶ್ಲೀಲ ವಿಡಿಯೋ, ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದು ಬಾಲಕಿ ಕುಟುಂಬಸ್ಥರು ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿಲು ಎರಡೆರಡು ಬಾರಿ ತೆರಳಿದರೂ ಪಿಎಸ್‌ಐ ಹಾಗೂ ಇನ್ಸ್‌ಪೆಕ್ಟರ್ ದೂರು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ.

ಆರೋಪಿ ಲೊಕೇಶ ವಿರುದ್ಧ ದೂರು ದಾಖಲಿಸುತ್ತಿರುವ ಗೊತ್ತಾದ ಕೂಡಲೆ ಬಾಲಕಿ ವಾಸವಾಗಿದ್ದ ತಂದಗಾಲು ಗ್ರಾಮಕ್ಕೆ ತೆರಳಿದ ಲೊಕೇಶ, ಆಕೆಯ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮನನೊಂದ ಕುಟುಂಬಸ್ಥರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಬಳಿಕ ತಾಳಬೆಟ್ಟಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button