Belagavi NewsBelgaum News

*ಆಸ್ತಿ ತೆರಿಗೆ ಪಾವತಿ ರಿಯಾಯಿತಿ ಅವಧಿ ವಿಸ್ತರಣೆ*

ಪ್ರಗತಿವಾಹಿನಿ ಸುದ್ದಿ:  ಪ್ರಸ್ತುತ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ತೆರಿಗೆದಾರರಿಗೆ ಶೇಕಡಾ 5 ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜು.31 ರವರೆಗೆ ವಿಸ್ತರಿಸಲಾಗಿದೆ.

ತೆರಿಗೆದಾರರಿಗೆ ತಮ್ಮ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮೂಲಕ ಪಾವತಿಸುವ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ “Online Payment Integration of property tax” ಸಾಪ್ಟವೇರ್‌ನ್ನು ಬೆಳಗಾವಿ ಪಾಲಿಕೆಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುತ್ತದೆ.

ಆಸ್ತಿ ತೆರಿಗೆದಾರರು ಈಗಾಗಲೇ ತಮ್ಮ ಆಸ್ತಿ ತೆರಿಗೆಯ ಕುರಿತು PID Number ಇರುವ ಗಣಕೀಕೃತ ಫಾರ್ಮ-1 ಪಡೆದವರು ಬೆಳಗಾವಿ-1 ಕೇಂದ್ರಗಳಲ್ಲಿ ಹಾಗೂ Debit Card/Credit Card/Net Banking ನಿಂದ ಆನ್‌ಲೈನ್ ಮೂಲಕವೂ ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಸ್ತಿ ತೆರಿಗೆದಾರರು ಪಾಲಿಕೆಯ ವೆಬ್‌ಸೈಟ್ www.belagavicitycorp.org ವಿಕ್ಷಿಸಬಹುದು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button