Kannada NewsKarnataka News

ಬೆಳಗಾವಿಯಲ್ಲಿ ಎಲೆಕ್ಟ್ರಿಕ್ ಸೈಕಲ್, ಸ್ಕೂಟರ್ ಬಾಡಿಗೆ ಯೋಜನೆ

https://youtu.be/UaOxCgdwnE8

 

https://youtu.be/DbDiQYRYB4g

ಬೆಳಗಾವಿಯಲ್ಲಿ ಎಲೆಕ್ಟ್ರಿಕ್ ಸೈಕಲ್, ಸ್ಕೂಟರ್ ಬಾಡಿಗೆ ಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 

ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿರುವ ಬೆಳಗಾವಿಯಲ್ಲಿ ಸ್ಮಾರ್ಟ್ ಸೈಕಲ್ ಟ್ರ್ಯಾಕ್ ನಿರ್ಮಿಸಿ, ಎಲೆಕ್ಟ್ರಿಕ್ ಸೈಕಲ್ ಮತ್ತು ಸ್ಕೂಟರ್ ಗಳನ್ನು ಬಾಡಿಗೆ ಆಧಾರದ ಮೇಲೆ ಒದಗಿಸುವ ವಿನೂತನ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಈ ಸಂಬಂಧ ಶಾಸಕ ಅಭಯ ಪಾಟೀಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಚೇರಮನ್ ರಾಕೇಶ ಸಿಂಗ್ ಜೊತೆ ಚರ್ಚಿಸಿದರು. ಇಂತಹ ಯೋಜನೆ ದೇಶದಲ್ಲೇ ಮೊದಲು ಬೆಳಗಾವಿಯಲ್ಲಿ ಜಾರಿಯಾಗಲಿದೆ. ಇದಕ್ಕೆ ರಾಕೇಶ್ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಈ ಯೋಜನೆಯ ಪ್ರಯೋಜನ ಪಡೆಯಲು ಇದಕ್ಕಾಗಿ ರೂಪಿಸುವ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬರುವ ಜನೆವರಿ ಹೊತ್ತಿಗೆ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.

 ಯೋಜನೆಯ ನೀಲನಕ್ಷೆ ರೂಪಿಸಲಾಗುತ್ತಿದ್ದು,  ಅಮೇರಿಕಾದಂತಹ ದೇಶಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿರುವ ಈ ಯೋಜನೆಯನ್ನು  ಬೆಳಗಾವಿಯಲ್ಲಿ ಜಾರಿಗೆ ತರಲು ಅಭಯ ಪಾಟೀಲ ಮುಂದಾಗಿದ್ದಾರೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button