Kannada NewsKarnataka NewsNationalPolitics

ಚರ್ಚ್‌ ಮೇಲೆ ನಡೆದ ದಾಳಿಯಲ್ಲಿ ಸಾವಿನ ಸಂಖ್ಯೆ 20ಕ್ಕೆ ಏರಿಕೆ

ಪ್ರಗತಿವಾಹಿನಿ ಸುದ್ದಿ: ರಷ್ಯಾದ ದಾಗಿಸ್ತಾನ ಪ್ರಾಂತದ ಚರ್ಚ್‌ ಮೇಲೆ ನಡೆದ ದಾಳಿಯಲ್ಲಿ ಸಾವಿನ ಸಂಖ್ಯೆ 20ಕ್ಕೇರಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಲು ಸಮತಿಯನ್ನು ರಚಿಸಲಾಗಿದೆ. 

ಅಲ್ಲದೆ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ಯಾವುದೇ ಸಂಭ್ರಮಾಚರಣೆಗಳಿಗೆ ನೀ‍ಷೇಧ ಹೇರಲಾಗಿದೆ. ರಾಷ್ಟ್ರ ಧ್ವಜವನ್ನು ಕಟ್ಟಡಗಳ ಮೇಳೆ ಅರ್ಧಕ್ಕೆ ಇಳಿಸಲಾಗಿದೆ.

ಪೊಲೀಸರು ಹಾಗೂ ನಾಗರಿಕರು ಸೇರಿ 20 ಮಂದಿ ಮೃತಪಟ್ಟಿದ್ದಾರೆ. ದಾಳಿ ನಡೆಸಿದ 6 ಉಗ್ರರಲ್ಲಿ 5 ಮಂದಿಯನ್ನು ಪೊಲೀಸರು ಗುಂಡಿಕ್ಕಿದ್ದಾರೆ.

ಘಟನೆಯಲ್ಲಿ ಪಾದ್ರಿ ಕೂಡ ಮೃತಪಟ್ಟಿದ್ದಾರೆ. ಪಾದ್ರಿಯನ್ನು ಉಗ್ರರು ಅಮಾನವೀಯವಾಗಿ ಕೊಂದಿದ್ದಾರೆ. ಈ ವೇಳೆ ಪಾದ್ರಿ ಕುಟುಂಬ ಕೂಡ ಅಲ್ಲಿ ಹಾಜರಿತ್ತು. ಕುಟುಂಬದ ಸದಸ್ಯರ ಮುಂದೆಯೇ ಪಾದ್ರಿಯನ್ನು ಹತ್ಯೆ ಮಾಡಲಾಗಿದೆ. ದಾಗಿಸ್ತಾನದ ಮುಖ್ಯಸ್ಥ ಸಗೈ ಮೆಲಿಕೊನ್ ದಾಳಿಯ ಹಿಂದೆ ಉಕ್ರೇನ್‌ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button