Kannada NewsKarnataka News

ಮೇಲೆದ್ದಿತು ಬೋರ್ಡ್, ದುರಸ್ತಿಯಾಯ್ತು ಹೈವೇ -Impact

ಮೇಲೆದ್ದಿತು ಬೋರ್ಡ್, ದುರಸ್ತಿಯಾಯ್ತು ಹೈವೇ

 

ಇದು ಭಾನುವಾರದ ಫೋಟೋ
ಇದು ಇಂದಿನ ಫೋಟೋ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

3ನೇ ರೈಲ್ವೆ ಗೇಟ್ ಬಳಿ ನೆಲಕ್ಕುರುಳಿದ್ದ ರಸ್ತೆ ನಾಮಫಲಕ ಮೇಲೆದ್ದು ನಿಂತಿದೆ. ರಾಷ್ಟ್ರೀಯ ಹೆದ್ದಾರಿ 4ಎ ದುರಸ್ತಿಯಾಗಿದೆ…

ಬೆಳಗಾವಿಯ ಖಾನಾಪುರ ರಸ್ತೆಯಲ್ಲಿನ ಎರಡು ಘಟನೆಗಳನ್ನು ಪ್ರಗತಿವಾಹಿನಿ ಪ್ರಕಟಿಸಿತ್ತು. ಬಿಗ್ ಬಜಾರ್ ಬಳಿ ನಿಲ್ಲಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮಾರ್ಗ ನಾಮಫಲಕ ಕಿತ್ತು ಬಿದ್ದಿತ್ತು. ಅಡಿಪಾಯ ಭದ್ರವಾಗಿರದ ಹಿನ್ನೆಲೆಯಲ್ಲಿ ಫಲಕ ಕಿತ್ತು ಬಿದ್ದಿತ್ತು. 3 ದಿನಗಳಾದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿರಲಿಲ್ಲ. ಭಾನುವಾರ ಪ್ರಗತಿವಾಹಿನಿ ವರದಿ ಮಾಡಿತ್ತು. ( ಈ ವರದಿ ಓದಿ – ದುರ್ಬಲ ಅಡಿಪಾಯ -ನೆಲಕ್ಕುರುಳಿದ ನಾಮಫಲಕ )

Home add -Advt

ಇದೀಗ ಅಧಿಕಾರಿಗಳು ನಾಮಫಲಕವನ್ನು ಮೇಲೆತ್ತಿ ನಿಲ್ಲಿಸಿದ್ದಾರೆ.

ಹೆದ್ದಾರಿ ದುರಸ್ತಿ

ನಿನ್ನೆ ಪ್ರಕಟವಾದ ಫೋಟೋ
ಇಂದು ದುರಸ್ತಿ ಮಾಡುತ್ತಿರುವ ಫೋಟೋ

ರಾಷ್ಟ್ರೀಯ ಹೆದ್ದಾರಿ 4 ಎ, ಖಾನಾಪುರ ರಸ್ತೆ ದೊಡ್ಡ ಹೊಂಡ ಬಿದ್ದು ಅಪಾಯಕಾರಿ ಸ್ಥಿತಿಯಲ್ಲಿತ್ತು. 2 ದಿನಗಳಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿರಲಿಲ್ಲ. ನಿನ್ನೆ ಪ್ರಗತಿವಾಹಿನಿ ಈ ಕುರಿತು ವರದಿ ಪ್ರಕಟಸಿತ್ತು. (ಇದನ್ನು ಓದಿ – ಹುಷಾರ್, ಇದು ರಾಷ್ಟ್ರೀಯ ಹೆದ್ದಾರಿ! )

ಮಂಗಳವಾರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ನಿರಂತರ ಸಂಚಾರ ದಟ್ಟಣೆಯಿಂದ ಕೂಡಿರುವ ಹೆದ್ದಾರಿ ಬಗೆಗೇ ಇಷ್ಟೊಂದು ನಿರ್ಲಕ್ಷ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Related Articles

Back to top button