*ಮೂಡಾ ಹಗರಣ ಕುರಿತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯಪಾಲರಿಗೆ ಒತ್ತಾಯ*
ಪ್ರಗತಿವಾಹಿನಿ ಸುದ್ದಿ: ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದ ಹಗರಣ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಾರದ ಹಗರಣ ವಾಗಿದ್ದು, ಪ್ರಭಾವಿ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು ಭಾಗಿದಾರರಾಗಿರುವ ಕಾರಣ. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಹಗರಣದಲ್ಲಿ ಪಾಲುದಾರರಾಗಿರುವ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಕಾಯ್ದೆ ಅಡಿಯಲ್ಲಿ ಶಿಕ್ಷಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಲಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹತ್ತು ನಿಮಿಷಗಳ ಕಾಲ ವಿವರ ಪಡೆದುಕೊಂಡರು. ಕಳೆದ ಒಂದು ವರ್ಷಗಳ ಹಿಂದೆ ಮುಡಾ ಕಚೇರಿಯಲ್ಲಿನ ದಾಖಲಾತಿಗಳು ಹಾಗೂ ಕಡತಗಳು ಕಳುವು ಆಗಿದ್ದು ಈ ಬಗ್ಗೆ ರೈತ ಸಂಘಟನೆಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು ಅವತ್ತಿನ ದಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಪ್ರಭಾವಿಗಳಿಂದ ಲಪಟಾಯಿಸುವುದು ತಪ್ಪುತಿತ್ತು. ಇಂದು ಬಹುತೇಕ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನರೇ ಪ್ರತಿನಿಧಿಗಳಾಗಿರುವ ಕಾರಣ ಈ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ರೈತರಿಗೆ ಸಾರ್ವಜನಿಕರಿಗೆ ಬಡವರಿಗೆ ವ್ಯವಸ್ಥಿತ ವಂಚನೆ ಮಾಡುತ್ತಿದ್ದಾರೆ ರೈತರ ಜಮೀನು ವಶಪಡಿಸಿಕೊಳ್ಳುವಾಗ ವಾಮಮಾರ್ಗಗಳನ್ನು ಬಳಸಿ ರೈತರಿಗೆ ಕಡಿಮೆ ಹಣ ನೀಡಿ ವಂಚಿಸಿ ರಿಯಲ್ ಎಸ್ಟೇಟ್ ದಳ್ಳಾಳಿಗಳು ಮೋಸ ಮಾಡುತ್ತಿದ್ದಾರೆ. ತಮ್ಮ ಹೆಸರಿನಲ್ಲಿ ಕೃಷಿ ಭೂಮಿ ನೀಡದೇ ಇರುವ ಕೆಲವು ದಳ್ಳಾಳಿಗಳು ನಾವು ಭೂಮಿ ನೀಡಿದ್ದೇವೆ ಎಂದು ಸುಳ್ಳು ದಾಖಲಾತಿ ನೀಡಿ ನಿವೇಶನ ಪಡೆದಿದ್ದಾರೆ ಹಾಲಿ. ಮಾಜಿ ಜನಪ್ರತಿನಿಧಿಗಳು. ಹಲವಾರು ನಿವೇಶನಗಳನ್ನು ಪಡೆದು ಸಾಮಾನ್ಯರಿಗೆ ಬಡವರಿಗೆ ಸಿಗಬೇಕಾದ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಈ ಹಗರಣದಲ್ಲಿ ಆಡಳಿತ ಪಕ್ಷ-ವಿರೋಧ ಪಕ್ಷಗಳ ಪ್ರಭಾವಿ ಮುಖಂಡರೇ ಬಾಗಿಗಳಾಗಿದ್ದಾರೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಎತ್ತಿ ಹಿಡಿಯಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದು ಸೂಕ್ತವಾಗಿದೆ ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ ಎಂದು ಕುರುಬುರ್ ಶಾಂತಕುಮಾರ್ ರಾಜಭವನ ಹೊರಗೆ ಬಂದಾಗ ಪತ್ರಕರ್ತರಿಗೆ ತಿಳಿಸಿದರು.
ನಿಯೋಗದಲ್ಲಿ ಕನ್ನಡ ಚಳುವಳಿ ಸಂಘದ ರಾಜ್ಯಾಧ್ಯಕ್ಷ ಗುರುದೇವ್ ನಾರಾಯಣ್, ವಕೀಲರಾದ ಎಲ್ ರವಿಕುಮಾರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಉಡಿಗಾಲ ರೇವಣ್ಣ, ತುಮಕೂರುಶಿವಕುಮಾರ್, ಬಾಗೇಪಲ್ಲಿ ಗೋವಿಂದರೆಡ್ಡಿ, ಸುಂದ್ರಪ್ಪ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ