ಪ್ರಗತಿವಾಹಿನಿ ಸುದ್ದಿ: ಚಿರತೆ ದಾಳಿಗೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವಗರಗೆರೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಸತತವಾಗಿ ಚಿರತೆ ದಾಳಿ ಮಾಡುತ್ತಿರುವುದರಿಂದ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವಗರಗೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ನಿನ್ನೆ ಮಧ್ಯಾಹ್ನ ರಾಜಣ್ಣ ಎಂಬುವವರಿಗೆ ಸೇರಿದ ಮೇಕೆ, ರಾತ್ರಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಒಂದೇ ದಿನ ಎರಡು ಭಾರಿ ಚಿರತೆ ದಾಳಿ ಮಾಡಿದ್ದರಿಂದ ಗ್ರಾಮಸ್ಥರು ಹೆದರಿದ್ದಾರೆ.
ಈ ಹಿಂದೆ ಕೂಡಾ ಚಿರತೆ ಸಾಕಷ್ಟು ಸಲ ದಾಳಿ ಮಾಡಿದ್ದರೂ, ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಮತ್ತೆ ನಿನ್ನೆ ಒಂದೆ ದಿನ ಎರಡು ಸಲ ಚಿರತೆ ದಾಳಿ ಮಾಡಿದ್ದರಿಂದ ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ