Latest

ಬಂದೋಬಸ್ತ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ನಿಧನ

ಪ್ರಗತಿ ವಾಹಿನಿ ಸುದ್ದಿ; ಕಲಬುರಗಿ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ನಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.

ಕಲ್ಯಾಣಿ ಗುಗ್ಗರಿ ( 45) ಮೃತಪಟ್ಟವರು. ಅಪಜಲಪುರ ತಾಲೂಕಿನ ಗೊಬ್ಬೂರು ಗ್ರಾಮದವರಾಗಿದ್ದ ಕಲ್ಯಾಣಿ ಅವರು ನಿನ್ನೆ ರಾತ್ರಿ ಕಲಬುರಗಿಯ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಕರ್ತವ್ಯದಲ್ಲಿ ನಿರತರಾಗಿದ್ದರು‌.

Home add -Advt

ತಡ ರಾತ್ರಿ ಲಾಡ್ಜಿನ ತಮ್ಮ ಕೋಣೆಗೆ ಬಂದು ಮಲಗಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಣ ಮಳೆಗೆ ಕುಸಿದ ಗುಡ್ಡ; ಕಳಸ-ಹಿರೇಬೈಲು ಸಂಚಾರ ಸ್ಥಗಿತ

https://pragati.taskdun.com/latest/chikkamagalururainlandslidekalasa-hirebail-road-bandh/

Related Articles

Back to top button