Kannada NewsKarnataka News

ರಾಮದುರ್ಗ, ಸವದತ್ತಿಯಲ್ಲಿ ಸೆ.13ರಂದು ಜಲಶಕ್ತಿ ಮೇಳ

ರಾಮದುರ್ಗದಲ್ಲಿ ಸೆ.೧೩ ರಂದು ಜಲಶಕ್ತಿ ಮೇಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ತಾಲೂಕಾಡಳಿತ ರಾಮದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಜಲ ಶಕ್ತಿ ಮೇಳವನ್ನು ಸೆಪ್ಟೆಂಬರ ೧೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ರಾಮದುರ್ಗ ತಾಲ್ಲೂಕಿನ ಗೊಡಚಿ ರಾಮು ಅಜ್ಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಮೇಳದ ಉದ್ಘಾಟಕರಾಗಿ, ವಸ್ತು ಪ್ರದರ್ಶನ ಉದ್ಘಾಟಕರಾಗಿ ಕೆಎಲ್‌ಇ ಸಂಸ್ಥೆ ಸಂಸದರು ಹಾಗೂ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಬೆಳಗಾವಿ ಕೇಂದ್ರ ನೋಡಲ್ ಅಧಿಕಾರಿ ಗಿರೀಶ ಹೊಸೂರ ಹಸ್ತ ಪತ್ರಿಕೆ ಬಿಡುಗಡೆ ಮಾಡುವರು.
ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ ಅವರು ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅಥಿತಿಗಳಾಗಿ ರಾಮದುರ್ಗ ತಾಲ್ಲೂಕ ಪಂಚಾಯತ್ ಅಧ್ಯಕ್ಷರು ಶಶಿಕಲಾ ವೈ. ವಡ್ಡರ, ರಾಮದುರ್ಗ ತಾಲ್ಲೂಕ ಪಂಚಾಯತ್ ಉಪಾಧ್ಯಕ್ಷರು ಲಕ್ಕವ್ವ ಕೆ.ವಾರಿಮನಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಉಪಸ್ಥಿತರಿರುವರು.
ಅತಿಥಿಗಳಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ವಲಯ-೨ ಐಸಿಎಆರ್-ಅಟಾರಿ ನಿರ್ದೇಶಕರಾದ ಡಾ. ಎಂ.ಜೆ.ಚಂದ್ರೇಗೌಡ, ಧಾರವಾಡ ಕೃವಿವಿ ವಿಸ್ತರಣಾ ನಿರ್ದೇಶಕರಾದ ಡಾ. ರಮೇಶ ಬಾಬು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿರುವರು.

ಸವದತ್ತಿಯಲ್ಲಿ ಸೆ.೧೪ ರಂದು  

ಕೆಎಲ್‌ಇ ಸಂಸ್ಥೆಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ತಾಲೂಕಾಡಳಿತ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ಜಲ ಶಕ್ತಿ ಮೇಳ ಹಾಗೂ ಕೃಷಿ ಅಭಿಯಾನವನ್ನು ಸೆಪ್ಟೆಂಬರ್ ೧೪ ರಂದು ಬೆಳಗ್ಗೆ ೧೧.೩೦ ಗಂಟೆಗೆ ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಬೆಳಗಾವಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕರಾದ ಆನಂದ ಚಂದ್ರಶೇಖರ ಮಾಮನಿ ಅವರು ಅಧ್ಯಕ್ಷತೆಯನ್ನು ವಹಿಸುವರು.
ರೈಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ ಅವರು ಮೇಳದ ಉದ್ಘಾಟಕರಾಗಿ, ವಸ್ತು ಪ್ರದರ್ಶನ ಉದ್ಘಾಟಕರಾಗಿ ಕೆಎಲ್‌ಇ ಸಂಸ್ಥೆ ಸಂಸದರು ಹಾಗೂ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಕಿರು ಹೊತ್ತಿಗೆ ಬಿಡುಗಡೆ, ಬೆಳಗಾವಿ ಕೇಂದ್ರ ನೋಡಲ್ ಅಧಿಕಾರಿ ಗಿರೀಶ ಹೊಸೂರ ಹಸ್ತ ಪತ್ರಿಕೆ ಬಿಡುಗಡೆ ಮಾಡುವರು.
ಮುಖ್ಯ ಅಥಿತಿಗಳಾಗಿ ಸವದತ್ತಿ ತಾಲ್ಲೂಕ ಪಂಚಾಯತ್ ಅಧ್ಯಕ್ಷರಾದ ವಿನಯಕುಮಾರ. ಚಂ. ದೇಸಾಯಿ, ಸವದತ್ತಿಯ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಶಿಂತ್ರಿ, ಸವದತ್ತಿ ಎ.ಪಿ.ಎಂ.ಸಿ ಅಧ್ಯಕ್ಷರಾದ ಜಗದೀಶ ಹನಸಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಉಪಸ್ಥಿತರಿರುವರು.
ಅತಿಥಿಗಳಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ವಲಯ-೨ ಐಸಿಎಆರ್-ಅಟಾರಿ ನಿರ್ದೇಶಕರಾದ ಡಾ. ಎಂ.ಜೆ.ಚಂದ್ರೇಗೌಡ, ಧಾರವಾಡ ಕೃವಿವಿ ವಿಸ್ತರಣಾ ನಿರ್ದೇಶಕರಾದ ಡಾ. ರಮೇಶ ಬಾಬು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿರುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button