Belagavi NewsBelgaum NewsKannada NewsKarnataka News

*25ನೇ ಕಾರ್ಗಿಲ್ ವಿಜಯೋತ್ಸವ ಅದ್ಧೂರಿಯಾಗಿ ಆಚರಣೆಗೆ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಟ್ಟಣದ ಮುರಗೋಡ ರಸ್ತೆಯಲ್ಲಿರುವ ಪೃಥ್ವಿ ಗಾರ್ಡನ್ ದಲ್ಲಿ 25 ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಜು26 ರಂದು ಅದ್ದೂರಿಯಾಗಿ ನಡೆಸಲಾಗುವದು ಎಂದು ತಾಲೂಕಾ ಮಾಜಿ ಸೈನಿಕರ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸೈನಿಕ ಬಿ.ಬಿ.ಬೊಗೂರ ಹೇಳಿದರು.

ಪಟ್ಟಣದ ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್ ನಲ್ಲಿ 25 ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೈನಿಕರ ವೃತ್ತಿ ಜೀವನದಲ್ಲಿ ಯುದ್ದ ನಡೆದರೆ ಸೈನಿಕ ವೃತ್ತಿಯಲ್ಲಿ ಅದೊಂದು ಸುದೈವ. ತಾಯಿ ರಕ್ಷಣೆಯಲ್ಲಿ ತೊಡಗಿದಾಗ ವೈರಿಪಡೆಯ ಹೆಡಮೂರಿ ಕಟ್ಟಲು ಸೈನಿಕರಿಗೆ ಅದೊಂದು ಸುಸಂಧಿ. ಅಂತಹ ಕಾರ್ಗಿಲ್ ಯುದ್ದದ ದಿನಗಳನ್ನು ಪ್ರತಿವರ್ಷ ನೆನಪಿಸುವ 

ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಅವರು  ಕಾರ್ಗಿಲ್ ವಿಜಯ ದಿವಸ ಆಚರಿಸಿಕೊಂಡು ಬಂದಿದ್ದು ಅಂದು ಸೈನಿಕರಿಗೆ ಸತ್ಕಾರ, ಕಾರ್ಗಿಲ್ ಯುದ್ದದ ಸಾಧನೆಯ ಅನಾವರ ಹಾಗೂ ಯುದ್ಧದಲ್ಲಿ ಭಾಗವಹಿಸಿದ್ದ ಅನೇಕರ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ಭಾಗದ ಸೈನಿಕರಿಗೆ ಗೌರವ ತಂದಿದ್ದಾರೆ ಎಂದರು. 

ಅವರ ಮಾರ್ಗದರ್ಶನದಲ್ಲಿ ಜು26 ರಂದು ಅತ್ಯಂತ ವಿಜೃಂಭಣೆಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಿಸಲಿದ್ದು ಅಂದು ಭಾರತೀಯ ರಕ್ಷಣಾ ಪಡೆ ಪಾಕಿಸ್ತಾನದ ವಿರುದ್ದ ಗೆಲವು ಸಾಧಿಸಿ 25ವರ್ಷಗಳು ಸಂದಲಿವೆ. ಈ ನಿಟ್ಟಿನಲ್ಲಿ ಮಾಜಿ ಸೈನಿಕರ ಸತ್ಕಾರ, ಸೈನಿಕ ಕುಟುಂಬದ ಸಾಧನೆಗಾರರ ಸತ್ಕಾರ ಹಾಗೂ ನಗರದಲ್ಲಿ ಅಂದು ಮಾಜಿ ಸೈನಿಕರ ಪೇರೆಡ್ ನಡೆಸಲಾಗುವದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಮಾಜಿ ಸೈನಿಕರು ಸಂಪರ್ಕ ಮಾಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೊರಿದರು.

ಅತಿಥಿಯಾಗಿ ಆಗಮಿಸಿದ್ದ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕಾರ್ಗಿಲ್ ಯುದ್ದಕ್ಕೆ 25 ವಸಂತ ಪೊರೈಸುವ ಈ ಸಂದರ್ಭದಲ್ಲಿ ಹೊರಾಟದ ನಾಡು ಬೈಲಹೊಂಗಲದ ಭಾಗದಿಂದ ಅನೇಕ ಸೈನಿಕರು ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದು ಅವರ ಸಾಧನೆ ಹಾಗೂ ಕುಟುಂಬವನ್ನೆಲ್ಲ ಬಿಟ್ಟು ದೇಶ ಸೇವೆಗೈದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಅನೇಕ ವರ್ಷಗಳಿಂದ ಹಮ್ಮಿಕೊಂಡು ಬರುತ್ತಿರುವ ಕಾರ್ಗಿಲ್ ವಿಜಯ ದಿವಸ್ ಅತ್ಯಂತ ವಿಜೃಂಭಣೆಯಿಂದ ಪಟ್ಟಣದಲ್ಲಿ ಆಚರಿಸಲಾಗುವದು. ಈ ಕಾರ್ಯಕ್ರಮಕ್ಕೆ ಈ ನಾಡಿನ ಎಲ್ಲ ಮಾಜಿ ಹಾಗೂ ರಜೆಗೆ ಬಂದಿರೂವ ಸೈನಿಕರು ಹಾಗು ಕುಟುಂಬ ವರ್ಗ ಆಗಮಿಸಬೇಕೆಂದರು. 

ಪಟ್ಟಣದಲ್ಲಿ ನಡೆಯುವ ಬೆಳ್ಳಿ ಹಬ್ಬ ಕಾರ್ಗಿಲ್ ವಿಜಯ ದಿವಸಕ್ಕೆ ಆಗಮಿಸುವ ಮಾಜಿ ಹಾಗೂ ರಜೆಯಲ್ಲಿರುವ ಯೋಧರು ಹಾಗೂ ಸೈನಿಕರ ಕುಟುಂಬದಲ್ಲಿ ವಿಶೇಷ ಸಾಧನೆ ಮಾಡಿದವರು ತಮ್ಮ ವಿವರವನ್ನು ಪೋನ್ ಮೂಲಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಬಿ‌. ಬೋಗೂರ 97395 05451 ಶೇಖರ ನವಲಗಟ್ಟಿ9844514127 ಇವರಿಗೆ ತಿಳಿಸಲು ವಿನಂತಿ ಮಾಡಿದರು

ಪೂರ್ವಭಾವಿ ಸಭೆಯಲ್ಲಿ ಮಾಜಿ ಸೈನಿಕರಾದ ಗಂಗಪ್ಪ ಗುಗ್ಗರಿ, ಚಂದ್ರಶೇಖರ ನೇಸರಗಿ, ಶಿವಾನಂದ ಹಡಪದ, ಟಿ.ಬಿ.ಮಾವಿನಕಟ್ಟಿ, ಶೇಖರ ನವಲಗಟ್ಟಿ, ಚನ್ನಪ್ಪ ಬೇವಿನಕೊಪ್ಪ, ಸುರೇಶ ಕಮ್ಮಾರ, ಮಂಜುನಾಥ ಬಾಗೇವಾಡಿ, ಎಲ್.ಎಸ್.ಪಾಟೀಲ, ರಾಜಶೇಖರ ಸವಟಗಿ, ದೇಮನಗೌಡ ಪಾಟೀಲ, ಸೋಮನಿಂಗ ವಕ್ಕುಂದ ಮಹಾದೇವ ತುರಮರಿ, ದೇಮಪ್ಪ ಶಿರಗಾಂವಿ, ಉಳವಪ್ಪ ದೇಗಾಂವಿ, ಹಣಮಂತ ಹಳ್ಳಿ, ಬಸವರಾಜ ವಕ್ಕುಂದ,  ಕೆ.ಎಲ್.ಪಾಟೀಲ, ಚಂದ್ರಗೌಡ ಗೌಡರ, ಗಂಗಾಧರ ತಿಗಡಿ, ಬಾಬು ವಾಲಿಕಾರ,  ಶಿವಾನಂದ ಕುಂಬಾರ ಸೇರಿದಂತೆ ನೂರಾರು ಮಾಜಿ ಸೈನಿಕ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button