*ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜೀನಾಮೆ ನೀಡಲಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಯಿಂದ ಇಂದು ಕನ್ನಡ ಸಾಹಿತ್ಯ ಭವನ ಬೆಳಗಾವಿ ಚನ್ನಮ್ಮ ವೃತ್ತದಿಂದ ಸಂಘಟನೆಯ ಕಾರ್ಯಕರ್ತರು ನಡಿಗೆ ಮುಖಾಂತರ ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಎಸಗಿದ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ದಿಕ್ಕಾರ ಕೂಗಿ, ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಗೆ ಮನವಿ ಸಲ್ಲಿಸಿದರು.
ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ರಾಜ್ಯದ್ಯಕ್ಷರು ಮಹೇಶ ಎಸ್ ಶಿಗಿಹಳ್ಳಿ ಮನವಿ ಮಾಡಿ ಆಗ್ರಹಿಸಿದರು.
ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ನಡೆದಿರುವ 187 ಬಹುಕೋಟಿಯ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ನಿಗಮದ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ ಕಾನೂನು ಶಿಸ್ತು ಕ್ರಮ ಜರುಗಿಸಿ. ತಡಮಾಡದೆ ಮತ್ತೆ ನಿಗಮಕ್ಕೆ 187 ಕೋಟಿ ಹಣವನ್ನು ವಿನಿಯೋಗ ಮಾಡಬೇಕು ಮತ್ತು ನಿಗಮದ ಮೇಲ್ವಿಚಾರಕ ಚಂದ್ರಶೇಖರ್ ರವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. SC/ST ಸಮುದಾಯಕ್ಕೆ ಅಂಬೇಡ್ಕರ್ ಹಾಗೂ ವಾಲ್ಮೀಕಿ ನಿಗಮಕ್ಕೆ ಸರ್ಕಾರದಿಂದ ಸಿಗುವ ಹಲವು ಯೋಜನೆಗಳು ಪ್ರತಿ ವರ್ಷ ಅರ್ಜಿ ಸಲ್ಲಿಸುವ ನಿಜವಾದ ಫಲಾನುಭವಿಗಳಿಗೆ ಪ್ರಸ್ತುತ ವರ್ಷದಲ್ಲೇ ನಿಗಮದ ಯೋಜನೆಗಳು ತಲುಪುವಂತೆ ಕ್ರಮ ಜರುಗಿಸಬೇಕು ಎಂದರು.
SC/ST ಸಮುದಾಯದ ಜಾತಿ ಜನಗಣತಿಯಂತೆ ವಾಲ್ಮೀಕಿ ನಿಗಮ. ಅಂಬೇಡ್ಕರ್ ನಿಗಮಕ್ಕೆ ಸರಕಾರದ ಯೋಜನೆಗಳು ಸಾಲಭ್ಯಗಳು ಹೆಚ್ಚಳ ಮಾಡಬೇಕು. ನಮ್ಮ ರಾಜ್ಯದ ಪ್ರತಿ ಒಂದು ಜಿಲ್ಲೆ ತಾಲೂಕು ಹಳ್ಳಿ ಗ್ರಾಮಗಳಲ್ಲಿ ವಾಲ್ಮೀಕಿ ಭವನ ಅಂಬೇಡ್ಕರ್ ಭವನ ಕಡ್ಡಾಯವಾಗಿ ನಿರ್ಮಾಣವಾಗುವಂತೆ ಕ್ರಮ ಜರುಗಿಸಬೇಕು ಎಂದು ಬೇಡಿಕೆಗಳನ್ನು ರಾಜ್ಯಾಧ್ಯಕ್ಷರು ಮಹೇಶ ಎಸ್ ಶೀಗೀಹಳ್ಳಿ ಪ್ರಸ್ತಾಪಿಸಿದರು.
ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡಿದರೆ ರಾಜ್ಯದ್ಯಂತ ದಲಿತಪರ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿ ಪಾದಯಾತ್ರೆಯ ಮುಖಾಂತರ ಹೋರಾಟವನ್ನು ಕೈಗೊಂಡು ಬೆಂಗಳೂರಿನ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಶಕ್ತಿಯನ್ನು ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು
ಈ ಸಂದರ್ಬದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ ಎಸ್ ಶಿಗೀಹಳ್ಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲೇಶ್ ಮುಳಗಸಿ, ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷರು ರಾಮ್ ಪೂಜಾರಿ, ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಸೀತಿಮನಿ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಲಗಮಣ್ಣ ಹೊನ್ನಂಗಿ, ಬೆಳಗಾವಿ ಜಿಲ್ಲಾ ಸಹ- ಕಾರ್ಯದರ್ಶಿ ಭೀಮಣ್ಣ ಗಣಿಕೊಪ್ಪ, ಬೆಳಗಾವಿ ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ, ಬೆಳಗಾವಿ ತಾಲೂಕು ಉಪಾಧ್ಯಕ್ಷರು ಶಕ್ತಿ ಪೀ ಎಸ್, ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ್, ಬೆಳಗಾವಿ ನಗರ ಉಪಾಧ್ಯಕ್ಷರು ಸಚಿನ ಕೆ, ಖಾನಾಪುರ ತಾಲೂಕ ಅಧ್ಯಕ್ಷ ಆನಂದ್ ಊದಿ, ಖಾನಾಪುರ ತಾಲೂಕ ಉಪಾಧ್ಯಕ್ಷ ಬಾಬು ಹತ್ತರವಾಡಿ, ಬೈಲಹೊಂಗಲ ತಾಲೂಕು ಅಧ್ಯಕ್ಷ ಮಂಜು ಅಣ್ಣಯ್ಯ ತಳವಾರ್, ಬೈಲಹೊಂಗಲ ತಾಲೂಕು ಗೌರವ ಅಧ್ಯಕ್ಷ ದ್ಯಾಮಣ್ಣ ತಳವಾರ್, ರಾಯಬಾಗ ತಾಲೂಕು ಅಧ್ಯಕ್ಷ ಸುನೀಲ ನಾಯಕ್, ರಾಮದುರ್ಗ ತಾಲೂಕು ಅಧ್ಯಕ್ಷ ಮಂಜುನಾಥ ಹನಸಿ, ಸವದತ್ತಿ ತಾಲೂಕ ಅಧ್ಯಕ್ಷ ಬಸವರಾಜ ಪೂಜಾರ ಹಾಗೂ ಈ ಸಂದರ್ಭದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಸಂಘಟನೆಯ ಪದಾಧಿಕಾರಿಗಳು ರಾಜ್ಯಾಧ್ಯಕ್ಷ ಪ್ರವೀಣ ಮಾದರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಅಕ್ಕಮಡ್ಡಿ, ರಾಜ್ಯ ಉಪಾಧ್ಯಕ್ಷ ಅಕ್ಷಯ್ ಕೆ ಆರ್ ಸೇರಿದಂತೆ ಇನ್ನುಳಿದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ