Kannada NewsKarnataka NewsNationalPolitics

961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆ.ಪಿ.ಎಸ್.ಸಿಗೆ ಪ್ರಸ್ತಾವನೆ

ಪ್ರಗತಿವಾಹಿನಿ ಸುದ್ದಿ: ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಇಲಾಖೆಯಲ್ಲಿನ ಆಡಳಿತಾತ್ಮಕ ಸುಧಾರಣೆಗೆ ಹಲವು ರೀತಿಯ ಕ್ರಮ ಕೈಗೊಂಡಿದ್ದು ಖಾಲಿ ಇರುವ ಹುದ್ದೆಗಳ ಹಂತಹಂತವಾಗದ ಭರ್ತಿಗೆ ಮುಂದಾಗಿದ್ದಾರೆ. 

ಮೊದಲ ಹಂತದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹುದ್ದೆಗಳ ವಿವರ:- 

ಕಲ್ಯಾಣ ಕರ್ನಾಟಕ ಭಾಗದಲ್ಲಿ 34 ಕೃಷಿ ಅಧಿಕಾರಿ 223 ಸಹಾಯಕ ಕೃಷಿ ಅಧಿಕಾರಿ 17 ದ್ವಿತೀಯ ದರ್ಜೆ ಸಹಾಯಕರು, 17 ಬೆರಳಚ್ಚುಗಾರರು ಹಾಗೂ ಉಳಿಕೆ ವೃಂದದಲ್ಲಿ 84 ಕೃಷಿ ಅಧಿಕಾರಿ 586 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 961 ಹುದ್ದೆಗಳ ನೇಮಕಾತಿಗೆ ಕೃಷಿ ಇಲಾಖೆಯಿಂದ ಕರ್ನಾಟಕ ಲೋಕಾಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

 https://pragativahini.com/the-first-priority-for-solving-the-problems-of-small-town-journalists-kv-prabhakar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button