Kannada NewsKarnataka News

ಬರವಣಿಗೆ ಬದುಕನ್ನು ಕೊಡಬೇಕು -ಹುಕ್ಕೇರಿ ಶ್ರೀಗಳು

ಬರವಣಿಗೆ ಬದುಕನ್ನು ಕೊಡಬೇಕು -ಹುಕ್ಕೇರಿ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬರವಣಿಗೆ ಬದುಕನ್ನು ಕೊಡಬೇಕು. ಬದುಕಿಗೆ ಹತ್ತಿರವಾದ ಬರವಣಿಗೆ ಬರಬೇಕು. ಅಂತಹ ಬರವಣಿಗೆ ಸಾರ್ಥಕವಾಗುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಬೆಳಗಾವಿಯಲ್ಲಿ ಭಾನುವಾರ ಸಿದ್ದಾರ್ಥ ವಾಡೆನ್ನವರ್ ಅವರ 2 ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಪುಸ್ತಕ ನಿಜವಾದ ಸ್ನೇಹಿತ ಎನ್ನುವ ಮಾತಿದೆ. ಒಳ್ಳೆಯ ಚಿಂತನೆ, ಒಳ್ಳೆಯ ಪುಸ್ತಕ ನಮ್ಮ ಸಂಗಾತಿಗಳಾಗಬೇಕು. ವಾಡೆನ್ನವರ್ ಅವರ ಪುಸ್ತಕಗಳು ಸತ್ಯವನ್ನು ಆವರಿಸಿರುವ ಪುಸ್ತಕ ಗಳು, ಸತ್ಯಕ್ಕೆ ಹತ್ತಿರವಾದ ಬರಹಗಳನ್ನೊಳಗೊಂಡಿರುವ ಪುಸ್ತಕಗಳು ಎಂದು ಶ್ರೀಗಳು ಶ್ಲಾಘಿಸಿದರು.

ಇಂದು ಬಿಡುಗಡೆಯಾಗಿರುವ ಕರ್ನಾಟಕ ಪಾಲಿಟಿಕ್ಸ್ ಮತ್ತು ಸತ್ಯ ಎಲ್ಲಿದೆ ಪುಸ್ತಕಗಳ  ಕರಿತು  ವಾಡೆನ್ನವರ್ ಮಾತನಾಡಿದರು.  ತಮ್ಮ ಬರವಣಿಗೆಯ ದಾರಿಯನ್ನು ವಿವರಿಸಿದ ಅವರು, 5 ವರ್ಷದ ಹಿಂದೆ ಬರವಣಿಗೆಯ ಗಂಧ ಗಾಳಿಯೂ ಇರಲಿಲ್ಲ. ಓದು ಕೂಡ ಇರಲಿಲ್ಲ. ವ್ಯರ್ಥವಾಗುತ್ತಿದ್ದ ಸಮಯಗಳನ್ನು ಉಳಿಸಿ ದೃಢ ಸಂಕಲ್ಪದೊಂದಿಗೆ ಓದಲು ಆರಂಭಿಸಿದೆ. ಓದುತ್ತ ಓದುತ್ತ ಬರವಣಿಗೆ ಆರಂಭಿಸಲು ಪ್ರೇರೇಪಣೆಯಾಯಿತು. ಬರೆಯುತ್ತ ಬರೆಯುತ್ತ ಇನ್ನಷ್ಟು ಓದಲು ಅವಕಾಶವಾಯಿತು ಎಂದರು.
ಜಿ.ಎಸ್.ಮಾಳಗಿ ಪುಸ್ತಕ ಪರಿಚಯಿಸಿದರು.

 

ಆಧ್ಯಾತ್ಮ ಮತ್ತು ಧಾರ್ಮಿಕ ಪುಸ್ತಕಗಳ ಓದು ಮತ್ತು ಬರಹದಿಂದ ಆರಂಭವಾದ ಬರವಣಿಗೆ ಈಗ ರಾಜಕೀಯ ವಿಶ್ಲೇಷಣೆಗೂ ಕಾರಣವಾಗಿದೆ. ಸಮಾಜಕ್ಕೆ ಏನನ್ನಾದರೂ ಕೊಡಬೇಕೆನ್ನುವ ಹಂಬಲವೇ ಬರವಣಿಗೆ ಆರಂಭಿಸಲು ಕಾರಣ

 –ಸಿದ್ದಾರ್ಥ ವಾಡೆನ್ನವರ್, ಎಂಡಿ ಸತೀಶ್ ಶುಗರ್ಸ್ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button