ಗರ್ಭಿಣಿಯರ ಉಡಿ ತುಂಬಿದ ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಅಥಣಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆದ “ರಾಷ್ಟ್ರೀಯ ಪೋಷಣ್ ಅಭಿಯಾನ”ದ ಕಾರ್ಯಕ್ರಮವನ್ನು ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೊಡಿ ಸಂಸದ ಅಣ್ಣಾಸಾಬ್ ಜೊಲ್ಲೆ ಉದ್ಘಾಟಿಸಿದರು.
೧೫ಕ್ಕೂ ಹೆಚ್ಚು ಗರ್ಭಿಣಿಯರಿಗೆ ಉಡಿ ತುಂಬಿದ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಗರ್ಭಾವಸ್ಥೆಯಲ್ಲಿ ೯ ತಿಂಗಳ ಕಾಲ ಕಟ್ಟು ನಿಟ್ಟಾಗಿ ಶುದ್ಧ ಆಹಾರ, ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಪೋಷಣ್ ಅಡಿಯಲ್ಲಿ ೬ ಸಾವಿರ ರೂ, ಗಳನ್ನು ಪೌಷ್ಟೀಕ ಆಹಾರ ಸೇವಿಸಲು ನೀಡುತ್ತಿದೆ. ಎಲ್ಲ ಗರ್ಭಧಾರಣೆ ಮಾಡಿದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬೇಕು. ಭವಿಷ್ಯದ ಪೀಳಿಗೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಿಮ್ಮ ಜವಾಬ್ದಾರಿಯೂ ಸಹ ಅಷ್ಟೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೇಯಸ್ ಪಾಟೀಲ ಎಂಬ ಅಂಗನವಾಡಿ ಬಾಲಕನ ಹುಟ್ಟುಹಬ್ಬ ಆಚರಿಸಲಾಯಿತು. ಗರ್ಭಿಣಿಯರ ಉಡಿ ತುಂಬಿದ ಶಶಿಕಲಾ ಜೊಲ್ಲೆ ಬಾಲಕನನ್ನು ಎತ್ತಿಕೊಳ್ಳುವ ಮೂಲಕ ಅಭಿನಂದಿಸಿದರು.
ಅಥಣಿ ತಾಲೂಕಿನ ಮಹಿಳಾ ಮಕ್ಕಳ ಕಲ್ಯಾಣ ಹಾಗು ಶಿಶು ಅಭಿವೃದ್ದಿ ಇಲಾಖೆಯ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯತಿಯ ರವಿ ಬಂಗಾರೆಪ್ಪ, ಅಥಣಿ ಸಿಡಿಪಿಓ ಉದಯ ಪಾಟೀಲ, ಯೋಜನಾ ಉಪನಿರ್ದೇಶಕ ಬಸವರಾಜ ವರವಟ್ಟಿ ಮತ್ತು ಗುಂಡೇವಾಡಿ ವಿಭಾಗದ ಅಂಗನವಾಡಿ ಮೆಲ್ವಿಚಾರಕಿ ಮಹಾದೇವಿ ಸೂರ್ಯವಂಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ