ಪ್ರಗತಿವಾಹಿನಿ ಸುದ್ದಿ: ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಾಫ್ಟ್ ವೇರ್ ನಲ್ಲಿ ತಾಂತ್ರಿಕ ದೋಷವುಂಟಾಗಿದ್ದು, ಜಗತ್ತಿನಾದ್ಯಂತ ಆನ್ ಲೈನ್ ಸೇವೆಯಲ್ಲಿ ಭಾರಿ ವ್ಯತ್ಯಯವಾಗಿದೆ.
ಮೈಕ್ರೋಸಾಫ್ಟ್ ನ ಕ್ಲೌಡ್ ಸಾಫ್ಟ್ ವೇರ್ ಸರ್ವೀಸ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿಶ್ವದ ಪ್ರತಿಯೊಂದು ಆನ್ ಲೈನ್ ಕ್ಷೇತ್ರದ ಮೇಲೆ ಹೊಡೆತಬಿದ್ದಿದೆ. ಭಾರತ, ಅಮೆರಿಕಾ, ಬ್ರಿಟನ್, ಫಾನ್ಸ್ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲಿಯು ಆನ್ ಲೈನ್ ಸೇವೆಯಲ್ಲಿ ಸಮಸ್ಯೆಯಾಗಿದ್ದು, ಜನರು ಪರದಾಡುವಂತಾಗಿದೆ.
ಮೈಕ್ರೋಸಾಫ್ಟ್ ಕ್ಲೌಡ್ ಸರ್ವೀಸ್ ನಲ್ಲಿ ಸಮಸ್ಯೆ ಹಿನ್ನೆಲೆಯಲ್ಲಿ ಪ್ರಮುಖವಾಗಿ ವಿಮಾನ ನಿಲ್ದಾಣ, ವಿಮಾನ ಹಾರಾಟ, ರೈಲು ಸೇವೆ, ಷೇರುಮಾರುಕಟ್ಟೆ, ಬ್ಯಾಂಕಿಂಗ್ ಕ್ಷೇತ್ರಗಳ ಸೇವೆಯಲ್ಲಿ ಭಾರಿ ವ್ಯತ್ಯವಾಗಿದೆ. ಬೆಂಗಳೂರಿನ ಕೆಐಎ, ಗೋವಾ, ದೆಹಲಿಯ ಇಂದಿರಾಗಾಂಧಿ ಏರ್ ಪೋರ್ಟ್ ಗಳಲ್ಲಿ ಎಲ್ಲಾ ವಿಮಾನ ಹಾರಾಟದಲ್ಲಿ ವ್ಯತ್ಯವಾಗಿದೆ. ಆನ್ ಲೈನ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಏರ್ ಪೋರ್ಟ್ ಅಧಿಕಾರಿಗಳು, ಸಿಬ್ಬಂದಿಗಳು ಮ್ಯಾನುವಲ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಟಿಕೆಟ್ ಬುಕ್ಕಿಂಗ್, ಚೆಕ್ ಇನ್, ಚೆಕ್ ಔಟ್, ಬೋರ್ಡಿಂಗ್ ವ್ಯವಸ್ಥೆಯಲ್ಲಿಯೂ ವಿಳಂಬವಾಗುತ್ತಿದೆ.
ಮೈಕ್ರೋ ಸಾಫ್ಟ್ ಕ್ಲೌಡ್ ಸರ್ವಿಸ್ ನಲ್ಲಿ ಸಮಸ್ಯೆಯುಂತಾಗಿದ್ದು, ತಾಂತ್ರಿಕ ತಂಡ ಇದನ್ನು ಶೀಘ್ರದಲ್ಲೇ ಸರಿಪಡಿಸಲಿದೆ. ಮೈಕ್ರೋಸಾಫ್ಟ್ ಸಾಫ್ಟ್ ವೇರ್ ಬಳಕೆದಾರರು ಸಹಕರಿಸಬೇಕು ಎಂದು ಮೈಕ್ರೋಸಾಫ್ಟ್ ಮಾಹಿತಿ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ