Belagavi NewsBelgaum News

*ಬೆಳಗಾವಿ: ವಾಹನ ಸವಾರರು ಗಮನಿಸಿ; ಸಂಚಾರ ಮಾರ್ಗ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಘಟ್ಟ ಭಾಗದಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೂ ಮಳೆ ಅಬ್ಬರ ಜೋರಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಸೇತುವೆಗಳು ಶಿಥಲಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಂಚಾರ ಮಾರ್ಗ ಬದಲಿಸಲಾಗಿದೆ.

Home add -Advt

ಜಾಂಬೋಟಿ ಹಾಗೂ ಚೋರ್ಲಾ ಪ್ರದೇಶ ವ್ಯಾಪ್ತಿಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಸೇತುವೆಗಳು ಶಿಥಿಲಗೊಂಡಿದ್ದು ಈ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಿಸಲಾಗಿದೆ.

ಬೆಳಗಾವಿ ನಗರದಿಂದ ಜಾಂಬೋಟಿ ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಂಚರಿಸುವ ಎಲ್ಲಾ ಭಾರಿ ವಾಹನಗಳು ಪೀರನವಾಡಿ ಕ್ರಾಸ್ ಹತ್ತಿರ ಎಡ ತಿರುವು ಪಡೆದುಕೊಂಡು ಖಾನಾಪುರ ಮಾರ್ಗವಾಗಿ ಮುಂದೆ ಸಂಚರಿಸುವಂತೆ ಕೋರಲಾಗಿದೆ.

Related Articles

Back to top button