National

*ಗುಡಿಸಲಿಗೆ ನುಗ್ಗಿದ ಲಾರಿ: 8 ತಿಂಗಳ ಗರ್ಭಿಣಿ ಸೇರಿ ನಾಲ್ವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಹೆದ್ದಾರಿ ಬದಿಯ ಗುಡಿಸಲಿಗೆ ನುಗ್ಗಿದ್ದು, ಗುಡಿಸಲಿನಲ್ಲಿ ಮಲಗಿದ್ದ ಕುಟುಂಬದ ಮೇಲೆಯೇ ಹರಿದುಹೋಗಿದೆ. ಘಟನೆಯಲ್ಲಿ 8 ತಿಂಗಳ ಗರ್ಭಿಣಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

Home add -Advt

ಉತ್ತರ ಪ್ರದೇಶದ ಬಿಬಿಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಯೋಧ್ಯೆ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ನಸುಕಿನ ಜಾವ 1 ಗಂಟೆ ಸುಮಾರಿಗೆ ಡಂಪರ್ ಲಾರಿಯೊಂದು ಗುಡಿಸಲಿಗೆ ನುಗ್ಗಿದ್ದು, ನಿದ್ರೆಯಲ್ಲಿದ್ದ ಕುಟುಂಬದ ಮೇಲೆ ಹರಿದು ಪಲ್ಟಿಯಾಗಿ ಬಿದ್ದಿದೆ.

ದುರಂತದಲ್ಲಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಓರ್ವ ಬಾಲಕಿ ಮಾತ್ರ ಬದುಕುಳಿದಿದ್ದಾಳೆ. ಜೈತ್ ಪುರ ನಿವಾಸಿ ಉಮೇಶ್ (35), ಪತ್ನಿ ನೀಲಂ (32), ಪುತ್ರ ಗೋಲು(4), ಮಗಳು ಸನ್ನಿ (13) ಮೃತಪಟ್ಟಿದ್ದಾರೆ. ಇನ್ನೋರ್ವ ಮಗಳು ವೈಷ್ಣವಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಡಂಪರ್ ಚಾಲಕನನ್ನು ಬಂಧಿಸಿದ್ದಾರೆ.


Related Articles

Back to top button