Belagavi NewsBelgaum NewsKannada NewsKarnataka News

*ಉಗರಗೋಳ ಸಮೀಪ ಸಂಭವಿಸಿದ ಅಪಘಾತದಲ್ಲಿ ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಹಿರೇಕುಂಬಿ ಬಳಿ ಶುಕ್ರವಾರ ಸಂಜೆ ಎರಡು ಬೈಕ್ ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ‌‌ ಮೃತಪಟ್ಟಿದ್ದಾರೆ.

Home add -Advt

ಸವದತ್ತಿಯ ಬಸವರಾಜ ಪ್ರಭುನವರ (48), ಹಂಚಿನಾಳದ ನಿವಾಸಿ ಯಲ್ಲಪ್ಪ ಕೊರವಿನಕೊಪ್ಪ(46) ಮೃತರು.ಈ ಘಟನೆಯಲ್ಲಿ ಗಾಯಗೊಂಡ ಇಬ್ಬರು ಹಿಂಬದಿ ಸವಾರರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗಯ್ಯ, ಸವದತ್ತಿ ಸಿಪಿಐ ಡಿ.ಎಸ್. ಧರ್ಮಟ್ಟಿ ಭೇಟಿ ನೀಡಿ ಪರಿಶೀಲಿಸಿದರು‌. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related Articles

Back to top button