HealthKannada NewsLatestNational

*ಕ್ಯಾನ್ಸರ್ ಔಷಧಿಗಳ ದರ ಕಡಿತ*: *ಪರಿಷ್ಕೃತ ಪಟ್ಟಿ ಪ್ರಕಟಿಸಿದ ಕೇಂದ್ರ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಕ್ಯಾನ್ಸರ್‌ ಔಷಧಿಗಳ ಬೆಲೆಯಲ್ಲಿ ಭಾರಿ ಕಡಿತಗೊಳಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಔಷಧಿಗಳ ಪರಿಷ್ಕೃತ ದರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಇಂದಿನಿಂದಲೇ ಭಾರತದಾದ್ಯಂತ 1,364 ಬಗೆಯ ಕ್ಯಾನ್ಸರ್ ವಿರೋಧಿ ಔಷಧಿಗಳ ಪರಿಷ್ಕೃತ MRP ಜಾರಿಗೆ ಬಂದಿದ್ದು, ಇದರಿಂದ ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆ ಹೆಚ್ಚು ಕೈಗೆಟುಕುವಂತಾಗಲಿದೆ.

ಅಗತ್ಯ ಚಿಕಿತ್ಸೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ, 137 ಕ್ಯಾನ್ಸರ್ ಔಷಧಿಗಳ ಮೇಲಿನ ವ್ಯಾಪಾರ ಲಾಭಾಂಶಕ್ಕೆ (trade margins) ಮಿತಿ ವಿಧಿಸಲು ‘ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ’ (NPPA) ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಎನ್‌ಪಿಪಿಎಯು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಯ್ದ ಕ್ಯಾನ್ಸರ್ ಔಷಧಗಳಿಗೆ ವ್ಯಾಪಾರ ಲಾಭಾಂಶದ (ಟ್ರೇಡ್ ಮಾರ್ಜಿನ್) ಮಿತಿಗಳನ್ನು ನಿಗದಿಪಡಿಸಿದೆ, ಇದರ ಪರಿಣಾಮವಾಗಿ ಹಲವಾರು ಔಷಧೀಯ ರೂಪಕಗಳ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಿದೆ.

ಒಟ್ಟು 85 ಔಷಧಿ ಕಂಪನಿಗಳು 121 ಔಷಧಿಗಳಿಗೆ ಸಂಬಂಧಿಸಿದ 1,364 ಕ್ಯಾನ್ಸರ್ ವಿರೋಧಿ ಔಷಧಿ ರೂಪಕಗಳ (anti-cancer formulations) ಪರಿಷ್ಕೃತ MRP ವರದಿ ಮಾಡಿವೆ. ಇವುಗಳಲ್ಲಿ, 679 ಬ್ರಾಂಡ್‌ಗಳು ತಮ್ಮ ಔಷಧಗಳ ಬೆಲೆಯನ್ನು ಶೇಕಡಾ 50 ಕ್ಕಿಂತ ಹೆಚ್ಚು ಕಡಿಮೆ ಮಾಡಿವೆ. ದಾಖಲಾದ ಗರಿಷ್ಠ ಬೆಲೆ ಕಡಿತವು ಶೇಕಡಾ 96.45 ರಷ್ಟಿದೆ.

ಕ್ಯಾನ್ಸರ್‌ಗೆ ಬಳಸುವ ಹಲವಾರು ಪ್ರಮುಖ ಔಷಧಿಗಳ ಎಂಆರ್‌ಪಿಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ‘ಆರ್‌ಪಿಜಿ ಲೈಫ್ ಸೈನ್ಸಸ್’ ಸಂಸ್ಥೆಯ ‘ಪಾಲ್ಬೋಪ್ರೊ’ (Palbopro – Palbociclib 125 mg) ಕ್ಯಾಪ್ಸುಲ್‌ಗಳ ಬೆಲೆಯನ್ನು 40,421.33 ರೂ.ನಿಂದ 2,720 ರೂ.ಗೆ ಇಳಿಸಲಾಗಿದೆ. ಅದೇ ರೀತಿ, ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ‘ಆರ್ವಿನ್‌ಕೇರ್ ಫಾರ್ಮಾ’ (Arvincare Pharma) ಸಂಸ್ಥೆಯ ‘ಅಬಿರಾನ್’ (Abiron – Abiraterone Acetate 250 mg) ಮಾತ್ರೆಗಳ ಬೆಲೆಯು 41,250 ರೂ.ನಿಂದ 3,218.23 ರೂ.ಗೆ ಇಳಿದಿದೆ.

Bevacizumab ಔಷಧಿ
25,995 ರೂ. – ಹಳೆದರ
3,318 ರೂ. – ಹೊಸ ದರ

Pallbociclib ಔಷಧಿ
40,421 ರೂ. – ಹಳೆದರ
2,720 ರೂ. – ಹೊಸದರ

Fulvestrant ಔಷಧಿ
30,422 ರೂ. – ಹಳೆದರ
3,672 ರೂ. – ಹೊಸದರ

Related Articles

Back to top button