Kannada NewsLatestNational

*ಡಾ.ರಾಜ್ ಕುಮಾರ್ ಸಂಬಂಧಿ ಮನೆ ಮುಂದೆ ಸ್ಫೋಟ ಪ್ರಕರಣಕ್ಕೆ ಪೊಲೀಸರ ಸ್ಪಷ್ಟನೆ*: *ಐವರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್​​ಕುಮಾರ್​​ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ತಮಿಳುನಾಡಿನ ತಾಳವಾಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ದೀಪಾವಳಿ ಹಿನ್ನೆಲೆ ಪಟಾಕಿಯಿಂದ ಈ ಸ್ಫೋಟ ಆಗಿರಬಹುದೆಂದು ಮೊದಲು ಅನುಮಾನವಿತ್ತಾದರೂ, ಸ್ಫೋಟದ ತೀವ್ರತೆ ಗಮನಿಸಿದಾಗ ಕಚ್ಚಾ ಬಾಂಬ್​ನಿಂದ ಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ.

ಈ ನಡುವೆ ಪೊಲೀಸರು ಮನೆ ಮುಂದೆ ಓಡಾಡುತ್ತಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸ್ಫೋಟಗೊಂಡಿದ್ದು, ಪಟಾಕಿ. ಯಾವುದೇ ಕಚ್ಚಾಅ ಬಾಂಬ್ ಅಥವಾ ಇನ್ನ್ಯಾವುದೇ ಸ್ಫಟಕವಲ್ಲ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ರಾಜ್​ಕುಮಾರ್​ ತಂಗಿ ಮೊಮ್ಮಗಳು ಮನೋಜ್ಞ, ದೇವರ ದಯೆಯಿಂದ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಸ್ಫೋಟದ ಶಬ್ದ ಕೇಳಿ ಹೊರ ಬಂದ ಕೂಡಲೇ ಇಬ್ಬರು ಓಡಿ ಹೋಗಿರೋದು ಕಂಡುಬಂದಿದೆ. ನಾವು ಕೂಡ ಅವರನ್ನು ಫಾಲೋ ಮಾಡಿ ವಿಡಿಯೋ ಮಾಡಿದ್ದೇವೆ. ಆ ಹುಡುಗರು ನಮ್ಮ ಊರಿನವರೇ ಎಂದವರು ತಿಳಿಸಿದ್ದಾರೆ. ಒಟ್ಟು ಆರು ಜನರು ಪರಾರಿಯಾಗಿರುವ ಮಾಹಿತಿ ಇದೆ ಎನ್ನಲಾಗಿದೆ.

ಇದೀಗ ಪ್ರಕರಣ ಸಂಬಂಧ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button