Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಮಳೆಯಿಂದ ಯಾವುದೇ ತೊಂದರೆ ಇಲ್ಲ: ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಆಗುತ್ತಿದೆ. ಕಂದಾಯ, ಪೊಲೀಸ್, ಸಿಇಓ ಸೇರಿ ಎಲ್ಲರೂ ಸಭೆ ಮಾಡಿದ್ದೇವೆ. ಮಳೆಯಿಂದ ಯಾವುದೇ ತೊಂದರೆ ಸದ್ಯ ಇಲ್ಲ. ಕೃಷ್ಣ ನದಿಗೆ ಈಗ ಕೇವಲ 65 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಳೆಯಿಂದ ಸದ್ಯ ಯಾವುದೇ ತೊಂದರೆ ಇಲ್ಲ. ಘಟಪ್ರಭಾ ಜಲಾಶಯ 51 ಟಿಎಂಸಿ ನೀರು ಸಾಮರ್ಥ್ಯ ಹೊಂದಿದೆ. 32 ಟಿಎಂಸಿ ನೀರು ಸಂಗ್ರವಾಗಿದ್ದು ಯಾವುದೇ ತೊಂದರೆ ಇಲ್ಲ ಎಂದರು.

ಖಾನಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇಕಡಾ 37ರಷ್ಟು ಹೆಚ್ಚಿನ ಮಳೆ ಆಗಿದೆ. ತಾಲೂಕಿನಲ್ಲಿ 13 ಬ್ರಿಡ್ಜ್ ಗಳು ಮುಳುಗಡೆ ಆಗಿವೆ. ನಿನ್ನೆ ಕಂದಾಯ, ಲೋಕೋಪಯೋಗಿ ಸಚಿವರು ಮಾತನಾಡಿದ್ದಾರೆ. ಅವರ ನಿರ್ದೇಶನದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಚೋರ್ಲಾ ಘಾಟ್ ಹತ್ತಿರ ಕುಸುಮಳ್ಳಿ ಒಂದು ಬ್ರಿಡ್ಜ್ ಅಪಕಾರಿಯಾಗಿದೆ‌. ನಿನ್ನೆಯಿಂದ ಸಂಚಾರ ಮಾಡಬಾರದು ಎಂದು ಆದೇಶಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಭಾರೀ ಗಾತ್ರದ ವಾಹನಗಳನ್ನು ನಿಷೇಧ ಹೇರಲಾಗಿದೆ. ಸಣ್ಣ, ನಾಲ್ಕು ಟನ್ ಒಳಗಿನ ವಾಹನಗಳು ಓಡಾಡಬಹುದು. ಖಾನಾಪುರ ಮೇಲೆ ಪರ್ಯಾಯವಾಗಿ ಓಡಾಡಲು ಸೂಚನೆ ನೀಡಲಾಗಿದೆ ಎಂದರು. ಬಿದ್ದ ಮನೆಗಳಿಗೆ ಎನ್ ಡಿ ಆರ್ ಎಫ್ ರೂಲ್ಸ್ ಪ್ರಕಾರ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ 421 ಕಾಳಜಿ ಕೇಂದ್ರ ಮಾಡಲು ಸಿದ್ಧತೆ ಮಾಡಲಾಗಿದೆ.ಹಿಂದಿನ ಪ್ರವಾಹದ ಅನುಭವ ಇದೆ. ಎಲ್ಲಾ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾವುದು ಎಂದರು. ಬಳ್ಳಾರಿ ನಾಲಾ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಚರ್ಚೆ ಮಾಡ್ತಿನಿ, ಮಾಹಿತಿ ಪಡೆಯುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button