Belagavi NewsBelgaum NewsKannada NewsKarnataka News
*ನ್ಯಾಯಾಧೀಶರ ವಿರುದ್ಧ ಪ್ರತಿಭಟಿಸಿದ ವಕೀಲರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರು ವಕೀಲರನ್ನು ಬಂಧಿಸುವಂತೆ ಸೂಚನೆ ನೀಡಿದನ್ನು ಖಂಡಿಸಿ ಬೆಳಗಾವಿಯ ಬಾರ್ ಅಸೋಸಿಯೇಷನ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಬೆಳಗಾವಿ ನಗರದ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಲಾಯಿತು. ಬಳಿಕ ಮಳೆಯಲ್ಲೂ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ವಕೀಲರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೀವಡಸಣ್ಣನವರ, ವಕೀಲರ ಮೇಲೆ ದಬ್ಬಳಿಕೆ ನಡೆಯುತ್ತಿದೆ. ಬಾದಾಮಿ ತಾಲೂಕು ನ್ಯಾಯಾಧೀಶ ಸಂಜುಕುಮಾರ ಪಾಶ್ಚಾಪೂರ ಅವರು ಕೋರ್ಟ್ ನಲ್ಲೇ ವಕೀಲರಿಗೆ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದನ್ನು ಎಲ್ಲಾ ಬಾರ್ ಅಸೋಶಿಯೆಸನ್ ಖಂಡಿಸುತ್ತದೆ. ಈ ರೀತಿ ಘಟನೆ ಮರುಕಳಿಸಬಾರದು. ಹಾಗಾಗಿ ಒಂದು ದಿನ ಕೋರ್ಟ್ ಕಲಾಪ ಭಹಿಷ್ಕಾರ ಮಾಡುತ್ತೇವೆ ಎಂದು ತಿಳಿಸಿದರು.




