Latest

*ಪ್ರೀತಿಸಿದ ಯುವತಿಯನ್ನು ಕೊಲೆಗೈದು ಹೂತಿಟ್ಟ ಯುವಕ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿದ ಯುವಕನೊಬ್ಬ ಪ್ರಿಯತಮೆಯನ್ನೇ ಕತ್ತು ಹಿಸುಕಿ ಕೊಲೆಗೈದು ಹೂತಿಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದೆ.

ಎರಡುವರೆ ವರ್ಷಗಳಿಂದ ಪ್ರೀತಿಸಿದ್ದ ಯುವತಿ ತನ್ನನ್ನು ಮದುವೆಯಾಗು ಎಂದು ಹಠ ಹಿಡಿದಿದ್ದಕ್ಕೆ ಯುವಕ ಆಕೆಯನ್ನು ಕೊಲೆಗೈದು ಹೂತಿಟ್ಟು ಸೈಲೆಂಟಾಗಿದ್ದ. ಯುವತಿಯ ಪೋಷಕರು ನೀಡಿದ ದೂರಿನ ಬೆನ್ನಲ್ಲೇ ಆರೋಪಿ ಯುವಕ ಸಿಕ್ಕಿ ಬಿದ್ದಿದ್ದು, ಅರೆಸ್ಟ್ ಆಗಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೌಮ್ಯ ಕೊಲೆಯಾದ ಯುವತಿ.ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಸೃಜನ್ ಪ್ರಿತಮೆಯನ್ನೇ ಕೊಂದ ಯುವಕ. ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೃಜನ್, ನರ್ಸಿಂಗ್ ಓಡುತ್ತಿದ್ದ ಸೌಮ್ಯಾಳನ್ನು ಪ್ರೀತಿಸಿದ್ದ. ಇಬ್ಬರೂ ಕಳೆದ ಎರಡುವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ ಮದುವೆಯಾಗುವಂತೆ ಕೇಳುತ್ತಿದ್ದಂತೆ ಸೃಜನ್ ಮನೆಯಲ್ಲಿ ಒಪ್ಪಿಲ್ಲ ಎನ್ನಲಾಗಿದೆ.

ಯುವತಿ ಜುಲೈ 2ರಂದು ತಾನು ತೀರ್ಥಹಳ್ಳಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರಟವಳು ಮನೆಗೆ ವಾಪಸ್ ಆಗಿಲ್ಲ. ಇತ್ತ ತೀರ್ಥಹಳ್ಳಿಗೆ ಆಗಮಿಸಿದ್ದ ಯುವತಿ ಸೌಮ್ಯ, ಸೃಜನ್ ಭೇಟಿಯಾಗಿ ಮದುವೆ ಬಗ್ಗೆ ಮಾತನಾಡಿದ್ದಾಳೆ. ಅಲ್ಲದೇ ನಿನ್ನ ಮನೆಗೆ ಕರೆದುಕೊಂಡು ಹೋಗು ಮಾತನಾಡುತ್ತೇನೆ ಎಂದಿದ್ದಾಳೆ. ಇದಕ್ಕೆ ಸೃಜನ್ ಈಗ ಬೇಡ ಎಂದು ಸಮಜಾಯಿಷಿ ಕೊಟ್ಟಿದ್ದಾನೆ. ಈ ವೇಳೆ ಸೌಮ್ಯಾ ಹಾಗೂ ಸೃಜನ್ ನಡುವೆ ಗಲಾಟೆಯಾಗಿದೆ. ಕೋಪದ ಬರದಲ್ಲಿ ಸೃಜನ್ ಸೌಮ್ಯಾ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿದ್ದಾನೆ. ಕತ್ತು ಹಿಸುಕುತ್ತಿದ್ದಂತೆ ಉಸಿರುಗಟ್ಟಿ ಸೌಮ್ಯಾ ಸಾವನ್ನಪ್ಪಿದ್ದಾಳೆ.

Home add -Advt

ಬಳಿಕ ಸೌಮ್ಯಾಳ ಶವವನ್ನು ಮುಂಬಾಳು ಬಳಿ ತಂದು ಹೂತಿಟ್ಟು ಎಸ್ಕೇಪ್ ಆಗಿದ್ದಾನೆ. ತೀರ್ಥಹಳ್ಳಿಗೆ ಹೋಗಿಬರುವುದಾಗಿ ಹೇಳಿದ್ದ ಸೌಮ್ಯ ಮನೆಗೆ ಬಂದಿಲ್ಲ. ಇದರಿಂದ ಪೋಷಕರು ಗಾಬರಿಯಾಗಿದ್ದು, ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಾಗರಕ್ಕೆ ತೆರಳಿ ಆರೋಪಿ ಸೃಜನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸೌಮ್ಯಾಳನ್ನು ಕೊಲೆಗೈದು ಹೂತಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾನೆ. ಯುವತಿಯ ಶವ ಹೊರೆತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button