*5 ದಿನದಿಂದ ಸತತ ಇಳಿಕೆ ಕಂಡ ಚಿನ್ನ*
ಪ್ರಗತಿವಾಹಿನಿ ಸುದ್ದಿ: ಈ ಬಾರಿ ಬಜೆಟ್ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ತೆರಿಗೆ 6% ರಷ್ಟು ಇಳಿಕೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಅಂದರೆ ಚಿನ್ನದ ಮೇಲಿನ ಕಸ್ಟಮ್ಸ್ ತೆರಿಗೆಯಲ್ಲಿ ಶೇ.4ರಷ್ಟು ಕಡಿತ ಮಾಡುವುದಾಗಿ ಘೋಷಿಸಿದೆ. ಇದು ದೇಶೀಯ ಮರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಲಿದೆ.
ಚಿನ್ನದ ಬೆಲೆ ಕಳೆದ 3 ತಿಂಗಳ ಹಿಂದೆ ಅಂದರೆ ಏಪ್ರಿಲ್ , ಮೇನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದವು. ಜೂನ್ ತಿಂಗಳಲ್ಲಿ ಅವು ಸ್ವಲ್ಪ ಕಡಿಮೆಯಾಗಿತ್ತು. ಆದರೆ, ಜುಲೈ ಆರಂಭದಲ್ಲಿ, ಮತ್ತೆ ದೊಡ್ಡ ಪ್ರಮಾಣದಲ್ಲಿ ಏರಿಯಾಗಿತ್ತು. ಇದೀಗ ಕಳೆದ 5 ದಿನಗಳಿಂದ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗುತ್ತಿದೆ.
ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 100 ರೂ. ಇಳಿಕೆಯಾಗಿದ್ದು, 67,700 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ 120 ರೂ. ಕುಸಿದಿದ್ದು, ಪ್ರತಿ 10 ಗ್ರಾಂಗೆ 73,850 ರೂ. ನಲ್ಲಿ ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆ ಕುಸಿದಿದ್ದರೂ, ಬೆಳ್ಳಿ ಬೆಲೆ ಸ್ಥಿರವಾಗಿದೆ. ಬೆಂಗಳೂರಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 96,000 ರೂ. ಇದೆ. ಕಳೆದ 3 ದಿನಗಳಲ್ಲಿ ಬೆಳ್ಳಿ 4500 ರೂ. ಕುಸಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ