ಶನಿವಾರದವರೆಗೂ ಡಿ.ಕೆ.ಶಿವಕುಮಾರ ತಿಹಾರ ಜೈಲಲ್ಲೇ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಅಕ್ರಮ ಹಣ ಸಂಪಾದನೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ವಿಚಾರಮೆ ಎದುರಿಸುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ ಅವರ ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದಕ್ಕೆ ಹೋಗಿದೆ.
ಗುರುವಾರ ವಿಚಾರಣೆ ಆರಂಭವಾದಾಗ ಜಾರಿ ನಿರ್ದೇಶನಾಲಯದ ವಕೀಲ ಕೆ.ಎಂ.ನಟರಾಜ, ಡಿ.ಕೆ.ಶಿವಕುಮಾರ ವಿರುದ್ಧ ಹಲವಾರು ಆರೋಪಗಳೊಂದಿಗೆ ತಮ್ಮ ವಾದ ಮಂಡಿಸಿದರು. ಬುಧವಾರ ಡಿ.ಕೆ.ಶಿವಕುಮಾರ ಪರ ಅಭಿಷೇಕ ಸಿಂಘ್ವಿ ವಾದ ಮಂಡಿಸಿದ್ದರು.
ಅದಕ್ಕೆ ಪ್ರತಿಯಾಗಿ ವಾದ ಆರಂಭಿಸಿದ ನಟರಾಜ, ಡಿ.ಕೆ.ಶಿವಕುಮಾರ ಅವರ ಹಣದ ವ್ಯವಹಾರ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಬೃಹತ್ ಪ್ರಮಾಣದಲ್ಲಿ ಸಾಲ ಪಡೆದಿದ್ದಾಗಿ ಹೇಳುತ್ತಾರೆ. ಆದರೆ ಯಾರಿಂದ ಸಾಲ ಪಡೆದಿದ್ದೆನ್ನುವದನ್ನು ಹೇಳುತ್ತಿಲ್ಲ. ಅದಕ್ಕೆ ಬಡ್ಡಿಯನ್ನೂ ಕಟ್ಟುತ್ತಿಲ್ಲ. ತಾಯಿ ಹಾಗೂ ಆಪ್ತರ ಹೆಸರಿನಲ್ಲಿ ಮಾಡಿರುವ ಆಸ್ತಿಗಳ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು ವಾದಿಸಿದರು.
ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು. ಹಾಗಾಗಿ ಇಂದು ಬೆಳಗ್ಗೆ ತಿಹಾರ್ ಜೈಲು ಸೇರಿರುವ ಡಿ.ಕೆ.ಶಿವಕುಮಾರ ಶನಿವಾರದವರೆಗೂ ಅಲ್ಲಿಯೇ ಇರಬೇಕಾಗುತ್ತದೆ.
ತಿಹಾರ್ ಜೈಲಿನ ಸೆಲ್ ನಂ.7ರಲ್ಲಿ ಆರ್ಥಿಕ ಅಪರಾಧಕ್ಕಾಗಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸಹ ಇರಿಸಲಾಗಿದೆ. ಚಿದಂಬರಂ ಅವರನ್ನು ಅಕ್ಟೋಬರ್ 3ರ ವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿವಕುಮಾರ ಅವರನ್ನು ಸಹ ಅಕ್ಟೋಬರ್ 3ರ ವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಈಗ ಇಬ್ಬರು ಕಾಂಗ್ರೆಸ್ ನಾಯಕರೂ ತಿಹಾರ್ ಜೈಲಿನ ಸೆಲ್ ನಂ 7ರಲ್ಲೇ ಕಳೆಯಬೇಕಾಗಿದೆ.
ಸಂಬಂಧಿಸಿದ ಸುದ್ದಿಗಳು – ಗಣ್ಯಾತಿಗಣ್ಯರಿಗೆ ಆಶ್ರಯ ನೀಡಿದ್ದ ತಿಹಾರ್ ಜೈಲು
ಡಿ.ಕೆ.ಶಿವಕುಮಾರ ತಿಹಾರ್ ಜೈಲಿಗೆ ಸ್ಥಳಾಂತರ, ಇಂದು ಬಿಡುಗಡೆ ಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ