Belagavi NewsBelgaum NewsKannada NewsKarnataka News

*ನಿವೃತ್ತಿ: ಶಾಲೆಗೆ ದೇಣಿಗೆ ನೀಡಿದ ಶಿಕ್ಷಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿಕ್ಷಕರು ದೇಶ ಕಟ್ಟುವ ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡುವ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವ ಕೆಲಸ ಸದಾ ಮಾಡುತ್ತಾರೆ. ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ ದಾರಿ ತೋರಿಸುವವನೇ ನೈಜ ಗುರು ಎಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಗೌಡರ ತೋಟದ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಾಹುಬಲಿ ತಮ್ಮನಗೌಡ ಪಾಟೀಲ್ ಹೇಳಿದರು. 

ಅವರು ಬುಧವಾರ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಬಸಗೊಂಡ ಪಾವಡೆಪ್ಪ ಬಿರಾದಾರ್ ಅವರ ಸೇವಾ ನಿವೃತ್ತಿ ದಿನದಂದು ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡುತ್ತಾ, ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಬಿರಾದಾರ್ ಗುರುಗಳು ಕಾರ್ಯವನ್ನು ಮಾಡುತ್ತಾ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಅನನ್ಯ, ಗ್ರಾಮದಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ, ಆದರೆ ಸರ್ಕಾರದ ನಿರ್ದೇಶನದಂತೆ ಇವತ್ತು ಅವರ ನಿವೃತ್ತಿ ಇರೋದ್ರಿಂದ ನಾವು ಬೇಸರದ ಮನಸ್ಸಿನಿಂದಲೇ ಅವನನ್ನು ಸನ್ಮಾನಿಸಿ ಬಿಳ್ಕೊಡುಗೆಯನ್ನು ಏರ್ಪಡಿಸಿದ್ದೇವೆ, ಮುಂದೆಯೂ ಕೂಡ ಅವರ ಮಾರ್ಗದರ್ಶನ ನಮಗೆ ಅವಶ್ಯವಾಗಿದ್ದು ಅವರ ನಿವೃತ್ತಿ ಶಿಕ್ಷಣ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ವಲಯ ಮೇಲ್ವಿಚಾರಕ ವಿಜಯಕುಮಾರ್ ಕನಾಳ  ಮಾತನಾಡುತ್ತಾ ಶಿಕ್ಷಕರು ತಮ್ಮ ತ್ಯಾಗ ಮತ್ತು ಸಮರ್ಪಣಾ ಮನೋಭಾವದಿಂದಲೇ ತಮ್ಮ ಶಿಷ್ಯರ ಮನಃ ಪಟಲದಲ್ಲಿ ಸದಾ ನಿಲ್ಲುತ್ತಾರೆ, ಜಗತ್ತಿನ ಶ್ರೇಷ್ಠ ವ್ಯಕ್ತಿಗಳ ನಿರ್ಮಾಣ ಉತ್ತಮ ಶಿಕ್ಷಕರಿಂದಲೇ ಸಾಧ್ಯವಾಯಿತು ಎಂದು ಅವರು ತನ್ನ ಅನಿಸಿಕೆ ವ್ಯಕ್ತ ಪಡಿಸಿದರು. 

ಇದೇ ಸಂದರ್ಭದಲ್ಲಿ ನಿವೃತ್ತಿ ಗೊಂಡ ಶಿಕ್ಷಕರಾದ ಬಸಗೊಂಡ ಬಿರಾದಾರ ಮಾತನಾಡಿ, ಮೊದಲಿನಿಂದಲೂ ಝುಂಜರವಾಡ ಗ್ರಾಮ ಚಿರಪರಿಚಿತ, ನಾನು ಕೂಡ ಬಡ ಕುಟುಂಬದಲ್ಲಿ ಹುಟ್ಟಿದರು ನಮ್ಮ ತಂದೆ ತಾಯಿ ಆ ಬಡತನದಲ್ಲಿ ನನಗೆ ಶಿಕ್ಷಣವನ್ನು ಕೊಡಿಸಿದರು. ಇಂತಹ ಸಂದರ್ಭದಲ್ಲಿ ಕೂಡ ನಾನು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮೂರು ದಶಕಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇನೆ ನನಗೆ ಹಲವು ಸಂದರ್ಭಗಳಲ್ಲಿ ಮಾರ್ಗದರ್ಶನ ನೀಡಿದ ಝುಂಜರವಾಡ ಗ್ರಾಮಸ್ಥರಿಗೆ ಆಭಾರಿಯಾಗಿದ್ದೇನೆ ಎಂದು ಹೆಳುತ್ತಾ ಭಾವುಕರಾದರು.

ಇದೆ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಚೆನ್ನಪ್ಪ ಈರಪ್ಪ ನೇಸರಗಿ, ವಕೀಲರಾದ ಸ್ವಪ್ನಿಲ್ ಪಟೇಲ್, ವಿವೇಕಾನಂದ ಬಾಗೇವಾಡಿ, ಮಹಾವೀರ್ ಹಳಿಂಗಳಿ, ಅಣ್ಣಸಾಬ್ ನದಾಫ್, ಶೀತಲಗೌಡ ಸವದತ್ತಿ,  ಎ ಜಿ ದೇಶಪಾಂಡೆ, ಎಸ್ ಸಿ ಬಿದರಿ, ಬೀರಪ್ಪ ಸನದಿ, ಜಿ ಎಂ ಬಡಿಗೇರ್ , ಎಸ್ ಎಸ್ ಹುಟಿ, ಎ ಸ್ ಪೂಜಾರಿ, ಜಿಎಸ್ ಶಿರೋಳ್, ಎಂ ಬಿ ಬಿಜ್ಜರಗಿ, ವೀಣಾ ಸಿಂಧೂರ್, ಆನಂದ ತೇಲಿ, ಮಹಾಂತೇಶ್ ಕುಂಬಾರ್ ಉಪಸ್ಥಿತರಿದ್ದರು, ಗೌರವ್ವ ಡೋನಜ್ ಕಾರ್ಯಕ್ರಮ ನಿರೂಪಿಸಿದರು, ನಂದೆಪ್ಪ ಬಗಲಿಪಾಟೀಲ್ ವಂದಿಸಿದರು.

ಕಳೆದ 30 ವರ್ಷಗಳಿಂದ ಸುದೀರ್ಘವಾಗಿ ಶಿಕ್ಷಣ ಸೇವೆ ಸಲ್ಲಿಸಿದ ಬಸಗೊಂಡ ಬಿರಾದಾರ ನಿವೃತ್ತಿ ಹೊಂದಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಗೌಡರ ತೋಟದ ಶಾಲೆಯ ಮಕ್ಕಳ ಭವಿಷ್ಯಕ್ಕೆ ಒಳಿತಾಗಲಿ ಎಂಬ ದೃಷ್ಟಿಯಿಂದ ಹತ್ತು ಸಾವಿರ ರೂಪಾಯಿ ಚೆಕ್ ವನ್ನು ಎಸ್ ಡಿ ಎಮ್ ಸಿ ಅವರಿಗೆ ಹಸ್ತಾಂತರ ಮಾಡಿದ್ದರು,  ಈ ಹಣವನ್ನು ಬ್ಯಾಂಕ್ ಖಾತೆಯಲ್ಲಿರಿಸಿ ಪ್ರತಿ ವರ್ಷ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿ ಸಹಾಯ ದನದ ರೂಪದಲ್ಲಿ ಅದರಿಂದ ಬಂದ ಬಡ್ಡಿ ಹಣವನ್ನು ವಿತರಿಸಿ ಎಂದು ಹೇಳಿ ಮನವಿ ಮಾಡಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button