Kannada NewsKarnataka News

ಪರಿಹಾರ ನೀಡದ್ದರಿಂದ 3 ಬಸ್ ಜಪ್ತಿ

ಅಪಘಾತದ ಬಳಿಕ ಪರಿಹಾರ ನೀಡದ ಮೂರು ಕೆಎಸ್ಸಾರ್ಟಿಸಿ ಬಸ್ಸುಗಳ ಜಪ್ತಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –  ಬೆಳಗಾವಿ ಘಟಕಕ್ಕೆ ಸೇರಿರುವ ಮೂರು ಕೆಎಸ್ಸಾರ್ಟಿಸಿ ಬಸ್ ಗಳನ್ನು ಜಪ್ತಿ ಮಾಡಲಾಗಿದೆ. ಅಪಘಾತಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಬಸ್ ಗಳನ್ನು ಜಪ್ತು ಮಾಡಲಾಗಿದೆ.

೨೦೧೩ , ೨೦೧೪ ರಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತ ನಡೆದಿತ್ತು. ಗಾಯಗೊಂಡಿದ್ದ ಇಬ್ಬರು ಸವಾರರು, ಅಪಘಾತದಲ್ಲಿ ಸಾವನ್ನಪ್ಪಿದ್ದ ಓರ್ವ ಬೈಕ್ ಸವಾರನಿಗೆ ಪರಾಹರ ನೀಡಿರಲಿಲ್ಲ.  ೨೦೧೪ ರ ಅಪಘಾತದಲ್ಲಿ ತಾಂವಶಿ ಮೂಲದ  ದತ್ತಾತ್ರೇಯ ಯಾದವ ಸಾವನ್ನಪ್ಪಿದ್ದ. ಮೃತ ದತ್ತಾತ್ರೇಯ ಕುಟುಂಬಕ್ಕೆ  ಪರಿಹಾರ ನೀಡುವಂತೆ  ನ್ಯಾಯಾಲಯ ಆದೇಶಿಸಿತ್ತು.
೨೦೧೪ ರಲ್ಲಿ ೧೧ ಲಕ್ಷ ರೂ ಪರಿಹಾರ ನೀಡಲು ಚಿಕ್ಕೋಡಿ ದಿವಾಣಿ ಹಿರಿಯ ನ್ಯಾಯಾಲಯ ಆದೇಶಿಸಿತ್ತು. ಆದರೆ ೯ ಲಕ್ಷ ರೂ ನೀಡಿ ಕೈ ತೊಳೆದುಕೊಂಡಿತ್ತು ಕೆಎಸ್ಸಾರ್ಟಿಸಿ. ಹಾಗಾಗಿ ೨೦೧೮ ರಲ್ಲಿ ಬಡ್ಡಿ ಸಮೇತ ೨೨ ಲಕ್ಷ ರೂ ನೀಡಲು ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿತ್ತು. ಇನ್ನುಳಿದ ೧೩ ಲಕ್ಷ ರೂ ಪರಿಹಾರ ನೀಡದ್ದರಿಂದ ಬಸ್ ಗಳನ್ನು ಜಪ್ತಿ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು. ನ್ಯಾಯವಾದಿ ಬಸವರಾಜ ಅಮಾತೆ, ಸಂಜು ರಾಜಬೂಯಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button