ಪ್ರಗತಿವಾಹಿನಿ ಸುದ್ದಿ: ಕೇರಳ ವಯನಾಡಿನಲ್ಲಿ ಸಂಭವಿಸಿದಂತ ಭೂ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗ್ತಿದೆ. ಇತ್ತ ಕನ್ನಡಿಗರ ಆಕ್ರಂದನ ಮುಗಿಲು ಮುಟ್ಟಿದೆ. ಜಲಸಮಾಧಿಯಾದ ನೂರಾರು ಮಂದಿಯಲ್ಲಿ ಸುಮಾರು 15ಕ್ಕೂ ಅಧಿಕ ಕನ್ನಡಿಗರೂ ಸಹ ಕಣ್ಮರೆಯಾಗಿದ್ದಾರೆ.
ವಯನಾಡಲ್ಲಿ ಕಣ್ಮರೆಯಾದ ಕನ್ನಡಿಗರ ಮಾಹಿತಿನೂ ಸಿಕ್ಕಿದೆ. ಇದರಲ್ಲಿ ಬಹುತೇಕ ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದುಬಂದಿದೆ. ಇದರೊಂದಿಗೆ ಕನ್ನಡಿಗರ ಸಾವು 8ಕ್ಕೆ ಏರಿಕೆಯಾಗಿದೆ
ಚಾಮರಾಜನಗರದ ರಾಜೇಂದ್ರ (50), ಹಾಗೂ ಪತ್ನಿ ರತ್ನಮ್ಮ (45) ಕಳೆದ ಕೆಲ ವರ್ಷಗಳ ಹಿಂದೆ ವಯನಾಡು ಜಿಲ್ಲೆಯ ಮೇಪ್ಪಾಡಿಯಲ್ಲಿ ವಾಸವಾಗಿದ್ದರು. ಆದರೆ ಸೋಮವಾರ ನಡೆದ ಭೀಕರ ಭೂ ಕುಸಿತದಲ್ಲಿ ನಾಪತ್ತೆಯಾಗಿದ್ದರು.
ಇದೀಗ ರಾಜೇಂದ್ರ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ದೊರಕಿದ್ದು, ಕುಟುಂಬಸ್ಥರು ಶವವನ್ನು ಗುರುತಿಸಿದ್ದಾರೆ. ಸದ್ಯ ಸಾಮೂಹಿಕ ಅಂತ್ಯ ಸಂಸ್ಕಾರದ ಮೂಲಕ ಅಂತಿಮ ವಿಧಿ ಪೂರೈಕೆ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ