ಅಂಗಾಂಗ ದಾನ ಮಾಡಲು ಜನರು ನಿರ್ಣಾಯಕ ಪಾತ್ರವಹಿಸಬೇಕು: ಡಾ. ಎಂ ದಯಾನಂದ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವದ ಅನೇಕ ದೇಶಗಳಲ್ಲಿ ಅಂಗಾಂಗ ಕಸಿ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ. ಅದರಂತೆ ಆ ದೇಶದ ಜನ ಅಂಗಾಂಗಳನ್ನು ದಾನ ಮಾಡಲು ಮೊದಲೇ ನಿರ್ಧರಿಸಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಅದು ವ್ಯತಿರಿಕ್ತವಾಗಿದೆ. ಆದ್ದರಿಂದ ಅಂಗಾಂಗಳನ್ನು ದಾನ ಮಾಡಲು ಜನರು ನಿರ್ಣಾಯಕ ಪಾತ್ರವಹಿಸಬೇಕು. ಕೆಲವೊಮ್ಮೆ ಕಾನೂನು ಮಾಡದ ಜೀವ ಉಳಿಸುವ ಕಾರ್ಯವನ್ನು ಮಾನವೀಯತೆ ಮಾಡುತ್ತದೆ. ಆದ್ದರಿಂದ ಜೀವ ಉಳಿಸುವ ಈ ಮಹೊನ್ನತ ಕಾರ್ಯದಲ್ಲಿ ಭಾಗವಹಿಸುವ ಸಂಕಲ್ಪವನ್ನು ಮಾಡಬೇಕೆಂದು ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರೀಯ ಅಂಗಾಂಗ ದಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು ಕೇವಲ, ಕಿಡ್ನಿ, ಹೃದಯ, ಲೀವರ, ಕಣ್ಣು ಮಾತ್ರವೇ ಕಸಿ ಮಾಡುತ್ತಿದ್ದರು. ಈಗ ಕೈಗಳನ್ಬು ಕೂಡ ಮಾಡುತ್ತಿದ್ದಾರೆ. ಅತೀ ಹೆ್ಚ್ಚು ಅಂಗಾಂಗ ಕಸಿ ಮಾಡಿದ ರಾಜ್ಯದ ಎರಡನೇ ಸ್ಥಾನದಲ್ಲಿ ನಮ್ಮ ಆಸ್ಪತ್ರೆ ಇದೆ. ಅತ್ಯಂತ ಕಠಿಣ ಕಾರ್ಯವಾಗಿದ್ದು, ಅರ್ಪಣಾ ಮನೋಭಾವದಿಂದ ಕೂಡಿದೆ. ಲಂಗ ಕಸಿ ಮಾಡಲು ತಯಾರಿದ್ದು, ಅದು ಶೀಘ್ರದಲ್ಲಿಯೇ ನೆರವೇರಲಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಡಾ. ಆರ್ ಬಿ ನೇರ್ಲಿ ಅವರು ಮಾತನಾಡಿದರು. ಅಂಗಾಂಗ ದಾನದಲ್ಲಿ ಕಾನೂನಿನ ತೊಡಕು ಹಾಗೂ ಕೈಗೊಳ್ಳಬೆಕಾದ ಕ್ರಮಗಳ ಕುರಿತು ನಯನಾ ನೇರ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಸಂತೋಷ ಪಾಟೀಲ, ಡಾ. ಸ್ನೇಹಾ ಚಿಕ್ಕೋಡಿ, ಡಾ. ಅಭಿಷೇಕ ಪಾಟೀಲ, ಜನಸಂಪರ್ಕ ಅಧಿಕಾರಿ ರುದ್ರಗೌಡ ಪಾಟೀಲ, ನರ್ಸಿಂಗ ಸಿಬ್ಬಂದಿಗಳಾದ ಸುಭೋದಕಾಂತ ದರಗಶಟ್ಟಿ, ಅನಿಲ ಥರ್ಥಾರೆ, ಅಂಗಾಂಗ ದಾನಿಗಳಾದ ಹಣಮಂತಪ್ಪ ಸಾರ್ವಿ, ರುದ್ರಪ್ಪ ಕುಮೋಜಿ, ಮುಕುಂದ ರತನ ಅವರ ಕುಟುಂಬ ಸದಸ್ಯರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ, ಡಾ. ಬಸವರಾಜ ಬಿಜ್ಜರಗಿ, ಡಾ. ಆರಿಫ್ ಮಾಲ್ದಾರ, ಡಾ. ಸುದರ್ಶನ ಚೌಗಲಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾವ್ಯಾ ಪಾತ್ರೋಟ ನಿರೂಪಿಸಿದರು. ಡಾ. ರಾಜಶೇಖರ ಸೋಮನಟ್ಟಿ ಅವರು ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ