ಪ್ರಗತಿವಾಹಿನಿ ಸುದ್ದಿ: ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ನಾವು ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಸಿಎಂ ವಿರುದ್ದ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಇವತ್ತು ದೆಹಲಿಯಿಂದ ಬರುತ್ತಾರೆ ಎಂದು ಗೊತ್ತಿದೆ, ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡ್ತೀನಿ ಅಂತ ನಿಮಗೆ ಹೇಳಿದ್ದಾರಾ ಎಂದು ಮರು ಪ್ರಶ್ನೆ ಮಾಡಿದರು.
ಅಬ್ರಹಾಂ ಅವರು ಕೊಟ್ಟಿರುವ ದೂರು ತಿರಸ್ಕಾರ ಮಾಡಲು ನಾವು ಮನವಿ ಮಾಡಿದ್ದೇವೆ. ಇದರಲ್ಲಿ ಕಾನೂನು ಹಾಗೂ ರಾಜಕೀಯ ಹೋರಾಟಕ್ಕೆ ನಾನು ಸಿದ್ಧನಾಗಿದ್ದೇನೆ ಎಂದರು.
ಗೃಹ ಲಕ್ಷ್ಮಿ ಹಣ ಕೇವಲ ಜುಲೈ ತಿಂಗಳದ್ದು ಬಂದಿಲ್ಲ ಕೂಡಲೆ ಹಾಕಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಮಳೆಯಿಂದ ಆಗಿರುವ ತೊಂದರೆ ಪರಿಶೀಲಿಸಲು ಬೆಳಗಾವಿಗೆ ಬಂದಿದ್ದೇನೆ. ಪರಿಹಾರ ಕೊಡುವ ಕೆಲಸವನ್ನ ಸರಕಾರ ಮಾಡುತ್ತಿದೆ. ಜನ ಜಾನುವಾರುಗಳ ಪ್ರಾಣಹಾನಿಗೆ ಪರಿಹಾರ ಕೊಡುತ್ತಿದೇವೆ ಎಂದರು.
ಮುಂದಿನವಾರ ಹೆಚ್ಚಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ. ಸರಕಾರ ಮಳೆಯನ್ನು ಎದುರಿಸಲು ಸಜ್ಜಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಪ್ರವಾಹದ ಗ್ರಾಮಗಳಿಗೆ ಶಾಶ್ವತ ಪರಿಹಾರದ ವಿಚಾರದ ಬಗ್ಗೆ ತಿರ್ಮಾನ ಮಾಡಲಾಗುತ್ತದೆ. ಜನರು ಸಹಕಾರ ಕೊಡಬೇಕು ಎಂದರು.
ಯಡಿಯೂರಪ್ಪ ಅವರು ಸಿಎಂ ಇದ್ದಾಗ 5 ಲಕ್ಷ ಪರಿಹಾರ ಕೊಟ್ಡರು. ಆ ಸಮಯದಲ್ಲಿ ಎಲ್ಲರಿಗೂ ಸಿಕ್ಕಿಲ್ಲ. ಸದ್ಯ 1,20,000 ಸಾವಿರ ಹಣವನ್ನ ಕೊಡುತ್ತೇವೆ, ಜೊತೆಗೆ ಒಂದು ಮನೆಯನ್ನು ಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ್ ಪಾಟೀಲ್, ವಿಶ್ವಾಸ ವೈದ್ಯ, ಅಂಜಲಿ ನಿಂಬಾಳಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ