Belagavi NewsKannada NewsKarnataka NewsNationalPolitics

2 ವರ್ಷ ಸೇನೆಯಲ್ಲಿ ಕೆಲಸ ಮಾಡಿದರೆ ಜೀವನದಲ್ಲಿ ಶಿಸ್ತು, ಸಂಯಮ, ಆತ್ಮಸ್ಥೈರ್ಯ ಬರುತ್ತದೆ: ಡಾ. ಪ್ರಭಾಕರ್ ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗತ್ತಿನಲ್ಲಿ ಕೆಲವೊಂದು ರಾಷ್ಟ್ರ ಪ್ರತಿಯೊಬ್ಬ ನಾಗರಿಕ ಒಂದು ವರ್ಷ ದೇಶ ಸೇವೆ ಮಾಡಲು ಕಾನೂನು ರೂಪಿಸಿದೆ ಅದೇ ಪ್ರಕಾರ ನಮ್ಮ ಭಾರತೀಯರು ಯಾವುದೇ ಪದವಿಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆದರೆ ದೇಶ ಸೇವೆ ಮಾಡಲು ಕಡ್ಡಾಯವಾಗಿ ಎರಡು ವರ್ಷ ಭಾರತೀಯ ಸೇನೆಯಲ್ಲಿ ಕಾರ್ಯ ಮಾಡಿದರೆ ಜೀವನದಲ್ಲಿ ಶಿಸ್ತು ಮತ್ತು  ಸಂಯಮ ಹಾಗೂ ಆತ್ಮಸ್ಥೈರ್ಯ ಬರುತ್ತದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಹೇಳಿದರು.

ಅವರು ಶುಕ್ರವಾರದಂದು ಸಾಯಂಕಾಲ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎಲ್ಇ ಶಿಕ್ಷಣ ಸಂಸ್ಥೆಯ ಶ್ರೀಮತಿ ಶಾರದಾ ದೇವಿ ಕೋರೆ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಏರ್ವಿಂಗ್ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎನ್‌ಸಿಸಿ ಕರ್ನಲ್ ಮೋಹನ್ ನಾಯಕ್ ಹಾಗೂ ಇಯರ್ವಿಂಗ್ ಕರ್ನಲ್ ದೀಪಕ್ ಬಲವಾ ಹಾಗೂ ಶಾರದಾದೇವಿ ಕೋರಿ ಪ್ರೌಢಶಾಲೆಯ ಉಪರಾಚಾರ್ಯರಾದ ಜ್ಯೋತಿ ತಮ್ಮ ಗೌಡ ಹಾಜರಿದ್ದರು. 

ಪ್ರತಿಯೊಬ್ಬ ನಾಗರಿಕರು ತಮ್ಮ ಭಾರತ ದೇಶದ ಅಭಿಮಾನ ಮತ್ತು ಜೀವನದಲ್ಲಿ ಶಿಸ್ತು ಕಾಪಾಡಬೇಕಾದರೆ, ಭಾರತೀಯ ಸೇನೆಯಲ್ಲಿ ಸೇವೆ ಕಡ್ಡಾಯವಾಗಬೇಕು  ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಯುವಕರು ಪ್ರಾಥಮಿಕ ಹಂತದಲ್ಲಿ ಎನ್ ಸಿ ಸಿ ಮುಖಾಂತರ ಭಾರತೀಯ ಸೇವೆಯಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ ಎಂದು ಡಾ ಪ್ರಭಾಕರ್ ಕೋರೆ ಹೇಳಿದರು. 

ಎನ್‌ಸಿಸಿ ಕೆಡೆಟ್ಗಳಿಗೆ ಕೆಎಲ್ಇ  ಸಂಸ್ಥೆ ಹೆಮ್ಮೆಯ ಸಂಗತಿ, ನಮ್ಮ ದೇಶದ ಗನತಂತ್ರ ದಿವಸದಂದು ನವದೆಹಲಿ ನೆಡುವ ಪರೇಡನಲ್ಲಿ ನಮ್ಮ ಕೆಎಲ್ಇ  ಸಂಸ್ಥೆಯ ಪ್ರತಿ ವರ್ಷ ಇಬ್ಬರೂ ವಿದ್ಯಾರ್ಥಿ ಪ್ರತಿನಿಧಿಸುವ ನಮ್ಮ ಸಂಸ್ಥೆಯ ಹೆಮ್ಮೆ ಎಂದು ಡಾ ಪ್ರಭಾಕರ್ ಕೋರೆ  ಹೇಳಿದರು. 

ಈ ವೇಳೆ ಶಾರದಾದೇವಿ ಕೋರೆ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಏರ್ವಿಂಗ್ ಶಾಖೆಯನ್ನು ಕಾರ್ಯಧ್ಯಕ್ಷರಾದ ಡಾ ಪ್ರಭಾಕರ್ ಕೋರೆ ಇವರ ಹಸ್ತದಿಂದ ಉದ್ಘಾಟಿಸಲಾಯಿತು. ಈ ವೇಳೆ ಕರ್ನಲ್ ಮೋಹನ್ ನಾಯಿಕ್ ಮತ್ತು ದೀಪಕ್ ಬಲವ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅತಿಥಿಗಳ ಪರಿಚಯ ಆರ್‌ಎಂ ರಾಯಮನೆ ಮತ್ತು ವಿಜಯ್ ನಾಯಕ್ ಇವರು ಮಾಡಿಕೊಟ್ಟರು ವಾಸ್ತವಿಕವಾಗಿ ವಿನಾಯಕ್ ಪಾಟೀಲ್ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ ಸ್ಥಳೀಯ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು ಅಕ್ಷತಾ ಮನೆ ನಿರೂಪಿಸಿ ಎಂ ಆರ್ ನಾಗರಾಜ್ ವಂದಿಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button