Kannada NewsKarnataka NewsLatest

ಅಕ್ರಮ ಬಡಾವಣೆಗಳ ವಿರುದ್ಧ ಬುಡಾ ಸಮರ

ನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ ಬುಲ್ಡೋಜರ್ ಹಚ್ಚಿದೆ. ಸೋಮವಾರ ಬೆಳಗ್ಗೆ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿನಗರದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಬಡಾವಣೆಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ ಬುಲ್ಡೋಜರ್ ಹಚ್ಚಿದೆ. ಸೋಮವಾರ ಬೆಳಗ್ಗೆ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ನಗರದಲ್ಲಿ 200ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಆದರೆ ಮನೆಗಳ ನಿರ್ಮಾಣವಿಲ್ಲದ, ಹೊಸದಾಗಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳು 21. ಅವುಗಳನ್ನು ಪ್ರಾಧಿಕಾರ ತೆರವುಗೊಳಿಸುವ ಕಾರ್ಯಾಚರಣೆ ಶುರು ಮಾಡಿದೆ. ಮನೆಗಳು ನಿರ್ಮಾಣವಾಗಿರುವ ಬಡಾವಣೆಗಳ ವಿರುದ್ಧ ಕಾರ್ಯಾಚರಣೆ ಮಾಡುವುದಕ್ಕೆ ತಾಂತ್ರಿಕ ಸಮಸ್ಯೆ ಇದೆ ಎಂದು ನಸ್ಲಾಪುರೆ ಹೇಳುತ್ತಾರೆ.

ಈಗಾಗಲೆ 2-3 ಬಾರಿ ಅನಧಿಕೃತ ಬಡಾವಣೆಗಳ ಕುರಿತು ಪ್ರಕಟಣೆ ನೀಡಿ ಎಚ್ಚರಿಸಿದ್ದೇವೆ. ಜನರು ಅವುಗಳಲ್ಲಿ ಸೈಟ್ ಖರೀದಿಸಬಾರದೆಂದು ತಿಳಿಸಿದ್ದೇವೆ. ಈಗ ಕಾರ್ಯಾಚರಣೆ ಆರಂಭಿಸಿದ್ದೇವೆ. ಇತ್ತೀಚಿನ ಪ್ರವಾಹದಲ್ಲಿ ಇಂತಹ ಅನಧಿಕೃತ ಬಡಾವಣೆಗಳ ನಿವಾಸಿಗಳೇ ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಅವರಿಗೆ ಪರಿಹಾರ ನೀಡಲು ಕೂಡ ಅವಕಾಶವಿಲ್ಲ. ಅಲ್ಲದೆ ಇಂತಹ ಬಡಾವಣೆಗಳಿಂದ ನಗರಕ್ಕೆಲ್ಲ ತೊಂದರೆಯಾಗುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಈ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಬುಡಾ ಆಯುಕ್ತ ಪ್ರೀತಂ ನಸ್ಲಾಪುರೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಜನರು ಇನ್ನು ಮುಂದಾದರು ಎಚ್ಚರವಹಿಸಬೇಕು. ಅನಧಿಕೃತ ಬಡಾವಣೆಗಳಲ್ಲಿ ಸೈಟ್ ಖರೀದಿಸಿ ತೊಂದರೆಗೊಳಗಾಗಬಾರದು. ಯಾವು ಅಧಿಕೃತ, ಯಾವುದು ಅನಧಿಕೃತ ಮಾಹಿತಿ ಬೇಕಾದಲ್ಲಿ ನಮ್ಮ ಕಚೇರಿಗೆ ಸಂಪರ್ಕಿಸಬಹುದು

-ಪ್ರೀತಂ ನಸ್ಲಾಪುರೆ, ಬುಡಾ ಆಯುಕ್ತ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button