Karnataka NewsLatest

*ಟೆಕ್ಕಿ ನಾಪತ್ತೆ ಕೇಸ್ ಗೆ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ವಿಪಿನ್ ಗುಪ್ತಾ ನಾಪತ್ತೆ ಪ್ರಕರಣ ಆತಂಕಕ್ಕೆ ಕಾರಣವಾಗಿತ್ತು. ಪತ್ನಿ, ಮಕ್ಕಳು ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದರಿ. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ವಿಪಿನ್, ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ವಿಪಿನ್ ಪತ್ನಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಕೊಡಿಗೇಹಳ್ಳಿ ಪೊಲೀಸರು ವಿಪಿನ್ ಅವರನ್ನು ನೊಯ್ಡಾದಲ್ಲಿ ಪತ್ತೆ ಮಾಡಿದ್ದಾರೆ. ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದಾಗ ತಾನಾಗಿಯೇ ಮನೆ ಬಿಟ್ಟು ಹೋಗಿದ್ದಾಗಿ ಟೆಕ್ಕಿ ಹೇಳಿದ್ದಾರೆ.

Home add -Advt

ವಿಪಿನ್ ಹಾಗೂ ಅವರ ಪತ್ನಿಗೆ ವಯಸ್ಸಿನ ಅಂತರವಿದ್ದುದರಿಂದ ಪತ್ನಿ ನೀಡುತ್ತಿದ್ದ ಮಾನಸಿಕ ಹಿಂಸೆಗೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾನಂತೆ, ವಿಪಿನ್ ವಯಸ್ಸು 34. ಆದರೆ ಪತ್ನಿಗೆ 42 ವರ್ಷವಂತೆ. ಪತ್ನಿ ತನ್ನ ಮೇಲೆ ಕಂಟ್ರೋಲ್ ಮಾಡುತ್ತಾಳೆ. ತನ್ನ ಮೇಲೆ ಹಿಡಿತ ಸಾದಿಸಲು ಮನೆಗೆ ಸಿಸಿಟಿವಿ ಅಳವಡಿಸಿ ನಿಗಾ ಇಟ್ಟಿದ್ದಾಳೆ. ಆಕೆ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೇ ಮನನೊಂದು ಮನೆ ಬಿಟ್ಟಿದ್ದಾಗಿ ಪೊಲೀಸರ ಬಳಿ ವಿಪಿನ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.


Related Articles

Back to top button