Belagavi NewsBelgaum NewsKannada NewsKarnataka News

*ಸೂಪರ್ ಸಂಸಾರ ನಾಟಕ ಆಯೋಜನೆ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾಮ್ ಸೌಥ್ ಫೌಂಡೇಶನ್ ಹಾಗೂ  ರೋಟರಿ ಕ್ಲಬ್ ಆಫ್ ಬೆಳಗಾಮ್ ಸೌಥ್ ಸಂಯುಕ್ತವಾಗಿ ಅರ್ಪಿಸುವ ಗುರು ಇನ್ಸ್ಟಿಟ್ಯೂಟ್, ಹುಬ್ಬಳ್ಳಿ ಅಭಿನಯಿಸುವ ಹೊಚ್ಚ ಹೊಸ ಸುಂದರ ಕನ್ನಡ ನಗೆ ನಾಟಕ ‘ಸೂಪರ್ ಸಂಸಾರ’ ಆ. 18 ರಂದು ಸಂಜೆ 6:30ಕ್ಕೆ ಬೆಳಗಾವಿಯ ಕೆಎಲ್ಇ ಡಾ ಎಚ್ ಬಿ ರಾಜಶೇಖರ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 

ಹೆಸರಾಂತ ನಟ ನಿರ್ದೇಶಕ ಡಾ ಯಶವಂತ ಸರದೇಶಪಾಂಡೆ ನಿರ್ದೇಶಿಸಿ, ನಟಿಸುತ್ತಿರುವ ಈ ನಾಟಕದ ರಚನಾಕಾರರು ಸಂತೋಷ ಪವಾರ, ರಂಗದ ಮೇಲೆ ರವಿ ಕುಲಕರ್ಣಿ, ಶಿಲ್ಪಾ ಮೊಕಾಶಿ ಪಾಂಡೆ, ಪ್ರಿಯಾ ಕುಲಕರ್ಣಿ, ಕೃಷ್ಣಮೂರ್ತಿ ಗಾವಕರ್, ಪ್ರದೀಪ್ ಮುಧೋಳ ಹಾಗೂ ಅರ್ಪಿತಾ ಹೆಗ್ಗೋಡು ಅಭಿನಯಿಸಲಿದ್ದಾರೆ, ನೇಪಥ್ಯದಲ್ಲಿ ಜೀವನ್ ಫರ್ನಾಂಡಿಸ್, ನಾಗರಾಜ ಧ್ವನಿ ಬೆಳಕು ಹಾಗೂ ರಂಗಸಜ್ಜಿಕೆ ವ್ಯವಸ್ಥೆ ಮಾಡಿದ್ದಾರೆ.

Home add -Advt

ಬೆಳಗಾವಿಯ ಶ್ರೀರಾಮ ಇನ್ನೋವೇಶನ್, ಶ್ರೀ ಸಾಯಿ ಸಂಸ್ಥೆ ಮತ್ತು ವಿಶಾಲ ಬಿಲ್ಡ್ ಸಂಸ್ಥೆಯ ಸಹಾಯ ಸಹಯೋಗದಲ್ಲಿ ಈ ರಂಗ ಪ್ರಸ್ತುತಿ ಸಾಧ್ಯವಾಗಿದೆ. ಬೆಳಗಾವಿಯ ನಾಟಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೋಟರಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂದು ವಿನಂತಿಸುವ ರೊಟೇರಿಯನಗಳಾದ ನಿಲೇಶ ಪಾಟೀಲ್, ಭೂಷಣ್ ಮೇತ್ರೆ, ಉದಯ ಜೋಶಿ, ಸಮೀರ ಜೋಶಿ, ಆರತಿ ಅಂಗಡಿ ಹಾಗೂ ಗೋವಿಂದ ಮಿಸಾಳೆ. ಪ್ರವೇಶ ಪತ್ರಗಳಿಗೆ +91 98863 10533 ಸಂಖ್ಯೆಯನ್ನು ಸಂಪರ್ಕಿಸಿ.

Related Articles

Back to top button