Kannada NewsKarnataka NewsNationalPolitics

*ಯಡಿಯೂರಪ್ಪ ಪ್ರಕರಣ ಬೇರೆ ಮುಡಾ ಪ್ರಕರಣ ಬೇರೆ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರಕಾರವನ್ನು ಅಭದ್ರ ಮಾಡಲು ರಾಜ್ಯಪಾಲರು ಮಾಡಿದ್ದಾರೆ ಎನ್ನುವ ಆರೋಪ ಇದೆ‌. ನಾವು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಶನಿವಾರ ಹತ್ತರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ಪ್ರಾಸಿಕ್ಯೂಶನ್ ಕೊಡುತ್ತಾರೆ ಎನ್ನುವ ನಿರೀಕ್ಷೆ ಇತ್ತು‌‌. ನಾವು ಮಾನಸಿಕವಾಗಿ ‌ಸಿದ್ಧತೆ  ಕೊಡಬಹುದು. ನಮ್ಮ ಮುಂದೆ ಈಗ ಇರುವುದು ಕಾನೂನು ಹೋರಾಟ ಪ್ರಾರಂಭ ಮಾಡುತ್ತೇವೆ. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ ಎಂದುರು.

ಕೇಂದ್ರ ಸರಕಾರದ ಸುಮಾರು 25 ಸಚಿವರಗಳ ಮೇಲೆ ಪ್ರಕರಣ ಇದ್ದಾವೆ. ಅವರು ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಿದೆ. ಅದು ಸಾಬೀತು ಆದರೆ ಮಾತ್ರ ರಾಜೀನಾಮೆ ಪ್ರಶ್ನೆ ಬರುತ್ತದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ನವರ ಪ್ರಕರಣ ಬೇರೆ ಮುಡಾ ಪ್ರಕರಣ ಬೇರೆ. ಕೇಂದ್ರ ಸರಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಾರೆ. ಆದ್ದರಿಂದ ಸಿದ್ದರಾಮಯ್ಯನವರ ಮೇಲೆ ರಾಜಕೀಯ ದುರುದ್ದೇಶದಿಂದ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

Home add -Advt

ಮುಂದಿನ ಸಿಎಂ ನೀವೆ ಎನ್ನುವ ಕೂಗು ಕೇಳಿ ಬರುತ್ತಿವೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರ ಮೇಲೆ ಆರೋಪ ಬಂದಿದೆ ಅಷ್ಟೆ ಎಂದರು.

ಸಚಿವ ಸಂಪುಟ ಸಭೆ ಕರೆದಿದ್ದಾರೆ. ಎಲ್ಲರೂ ಹೋಗಲು ಆಗುವುದಿಲ್ಲ. ಆದ್ದರಿಂದ ಇಂದು ರಾತ್ರಿ ನಾವು ಹೋಗುತ್ತಿದ್ದೇವೆ ಎಂದರು.

Related Articles

Back to top button