Kannada NewsKarnataka News

ಲಂಚ ಪಡೆದ ಪ್ರವಾಸೋದ್ಯಮ ಇಲಾಖೆ ಜವಾನರಿಗೆ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಪ್ರವಾಸೋದ್ಯಮ ಇಲಾಖೆಯಿಂದ ಸಬ್ಸಿಡಿಯಲ್ಲಿ ಮಂಜೂರಾದ ವಾಹನವನ್ನು ಪಡೆದುಕೊಳ್ಳಲು ಅರ್ಜಿಯನ್ನು ನೀಡಿದ್ದು ವಾಹನವನ್ನು ಮಂಜೂರು ಮಾಡಲು ಲಂಚ ಸ್ವೀಕರಿಸಿದ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಜವಾನ ಎಮ್.ಪಿ.ದೇವರಾಜ ಮತ್ತು ಮಲ್ಲಕಾರ್ಜುನ ದುಂಡಪ್ಪ ಹೆಗಡಿಹಾಳ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಬೆಳಗಾವಿ ಪ್ರವಾಸೋದ್ಯಮ ಇಲಾಖೆಯಿಂದ ಸಬ್ಸಿಡಿಯಲ್ಲಿ ಮಂಜೂರು ಮಾಡಲಾದ ವಾಹನವನ್ನು ಪಡೆದುಕೊಳ್ಳಲು ಶಿವಾಜಿ ನಿಂಗಪ್ಪ ವನ್ನೂರ ಅವರು ಅರ್ಜಿಯನ್ನು ನೀಡಿದ್ದು, ವಾಹನ ಮಂಜೂರು ಮಾಡಿಕೊಡುವುದಾಗಿ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಜವಾನರಾದ ಎಮ್.ಪಿ.ದೇವರಾಜ ಮತ್ತು ಮಲ್ಲಕಾರ್ಜುನ ದುಂಡಪ್ಪ ಹೆಗಡಿಹಾಳ ಅವರು 15 ಸಾವಿರ ರೂ.  ಲಂಚ ಪಡೆದುಕೊಂಡಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದರು.
2014ರ ಜುಲೈ 25ರಂದು ದಾಖಲಾದ ಪ್ರಕರಣದ ವಿಚಾರಣೆಯನ್ನು ನಡೆಸಿದ ೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಧೀಶರಾದ ಶಶಿಧರ ಶೆಟ್ಟಿ ಅವರು ಆಪಾದಿತರಾದ ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಜವಾನರಾದ ಎಮ್.ಪಿ.ದೇವರಾಜ ಮತ್ತು ಮಲ್ಲಕಾರ್ಜುನ ದುಂಡಪ್ಪ ಹೆಗಡಿಹಾಳ ಇವರನ್ನು  ತಪ್ಪಿತಸ್ಥರೆಂದು ತೀರ್ಪು ನೀಡಿ ಕಲಂ 7, ಲಂಚ ಪ್ರತಿಬಂಧಕ ಕಾಯ್ದೆ 1988 ನೇದ್ದರಲ್ಲಿ ಆಪಾದಿತರಿಗೆ ತಲಾ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ 7000 ಗಳ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಕಲಂ 13(1) ಡಿ ಸಹ ಕಲಂ 13 (2) ಲಂಚ ಪ್ರತಿಬಂಧಕ ಕಾಯ್ದೆ 1988 ಲಂಚ ಪ್ರತಿಬಂಧಕ ಕಾಯ್ದೆ 1988 ನೇದ್ದರಲ್ಲಿ ಆಪಾದಿತರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ 10,000 ಗಳ ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.
ಸದರಿ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಠಾಣೆಯ ಅಂದಿನ ಉಪಾಧೀಕ್ಷಕರಾದ ಜೆ.ಎಮ್.ಕರುಣಾಕರಶೆಟ್ಟಿ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಡಿ.ಕೆ.ಶಿವಕುಮಾರ್ ಗೆ ಜಾಮೀನು ನಿರಾಕರಣೆ

ಬಸ್ ಚಾಲಕನನ್ನು 24 ಗಂಟೆಯಲ್ಲಿ ಬಂಧಿಸಿ -ನ್ಯಾಯಾಲಯ ಆದೇಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button