Belagavi NewsBelgaum NewsKannada NewsKarnataka NewsLatest

ಯರಗಟ್ಟಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸಾರ್ವಜನಿಕರ ಗಮನಕ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯರಗಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದ ಹಾಗೂ ವಿಕಲಚೇತನರ ಫಲಾನುಭವಿಗಳ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿಯಲ್ಲಿ ಹಾಗೂ ಸ್ಥಳೀಯ ನಿಧಿ ಯೋಜನೆಯಡಿ ವಿವಿಧ ವೈಯಕ್ತಿಕ ಸೌಲಭ್ಯವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪ.ಜಾ/ಪ.ಪ ವರ್ಗದವರಿಗೆ (ಶೇ.೨೪.೧೦%)ಹೊಲಿಗೆ ಯಂತ್ರಗಳನ್ನು ಪೂರೈಸಲು ಹಾಗೂ ವೈದ್ಯಕೀಯ ವೆಚ್ಚ ಭರಿಸಲು ಸಹಾಯಧನ ನೀಡಲಾಗುವುದು. ಇತರೆ ಬಡಜನರ ಕಲ್ಯಾಣಕ್ಕಾಗಿ (ಶೇ.೭.೨೫%)ಹೊಲಿಗೆ ಯಂತ್ರಗಳನ್ನು ಪೂರೈಸಲಾಗುವುದು. ವಿಕಲಚೇತನರಿಗೆ (ಶೇ.೫%)ಶ್ರವಣ ಯಂತ್ರಗಳನ್ನು ಪೂರೈಸಲಾಗುವುದು.

ಆಸಕ್ತರು ಸೆಪ್ಟಂಬರ್.೧೨ ರೊಳಗಾಗಿ ಯರಗಟ್ಟಿ ಪಟ್ಟಣ ಪಂಚಾಯತಿ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಲಸದ ಸಮಯದಲ್ಲಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಎಂದು ಯರಗಟ್ಟಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button