*ಮುಡಾ ಟೆನ್ಶನ್ ಮಧ್ಯೆ ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ!*: *ಒಂದೇ ದಿನ 4 ಪುತ್ಥಳಿ ಅನಾವರಣ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮುಡಾ ಹಗರಣ ಟೆನ್ಶನ್ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ (ಆ. 26) ಬೆಳಗಾವಿ ಜಲ್ಲೆಯ ಪ್ರವಾಸ ಹಮ್ಮಿಕೊಂಡಿದ್ದಾರೆ.
ಗೋಕಾಕ ಹಾಗೂ ಮೂಡಲಗಿ ತಾಲೂಕಿನ 4 ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಗಳನ್ನು ಮುಖ್ಯಮಂತ್ರಿಗಳು ಒಂದೇ ದಿನ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ.
ಸೋಮವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು 11.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಸ್ತೆ ಮೂಲಕ ಗೋಕಾಕ ತಾಲೂಕಿನ ಕೌಜಲಗಿಗೆ ಆಗಮಿಸಿ ಕ್ರಾಂತಿವೂರ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ಕೋಟೆಯನ್ನು ಉದ್ಘಾಟಿಸುವರು.
ಅಲ್ಲಿಂದ ಡಾ.ಸಣ್ಣಕ್ಕಿ ಫಾರ್ಮ್ ಹೌಸ್ ಗೆ ತೆರಳುವ ಅವರು ಅಲ್ಲಿ ಊಟ ಮಾಡಿ, 2.30ಕ್ಕೆ ಕಳ್ಳಿ ಗುದ್ದಿ ಗ್ರಾಮಕ್ಕೆ ತೆರಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟಿಸುವರು.
3.30ಕ್ಕೆ ಯಾದವಾಡಕ್ಕೆ ತೆರಳಿ ಅಲ್ಲಿ ಸಹ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟಿಸಿ, 4.30ಕ್ಕೆ ಕಲ್ಲೋಳಿ ಗ್ರಾಮದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡುವರು.
ನಂತರ ಸಂಜೆ 6 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಹಿಂತಿರುಗುವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ