ಪ್ರಗತಿವಾಹಿನಿ ಸುದ್ದಿ, ಧಾರವಾಡ -ಭಾರಿ ವಿವಾದ ಸೃಷ್ಟಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ವಾರ್ಡ್ ನೋಟಿಫಿಕೇಶನ್ ರದ್ದಾಗಿದೆ. ಹೊಸದಾಗಿ ವಾರ್ಡ್ ರಚನೆ ಮತ್ತು ಮೀಸಲಾತಿ ಗೋಷಿಸುವುದಾಗಿ ಸರಕಾರ ಹೈಕೋರ್ಟ್ ಗೆ ತಿಳಿಸಿದೆ. ಇದರಿಂದಾಗಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆಗೆ ಸುಮಾರು 6 ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ವಾರ್ಡ್ ಗಳನ್ನು ಹೊಸದಾಗಿ ರಚಿಸಿ ಮತ್ತು ಮೀಸಲಾತಿ ಘೋಷಿಸಿ ಅಂದಿನ ಸರಕಾರ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ ವಾರ್ಡ್ ಮೀಸಲಾತಿ ಸರಿಯಾಗಿಲ್ಲ ಎಂದು ಭೈರಗೌಡ ಪಾಟೀಲ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು 2-3 ಬಾರಿ ಧಾರವಾಡ ಹೈಕೋರ್ಟ್ ನಲ್ಲಿ ವಿಚಾರಣೆ ನಿಗದಿಯಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಹೈಕೋರ್ಟ್ ಪ್ರಕರಣವನ್ನು ರದ್ದು ಮಾಡಿದೆ. ಇದಕ್ಕೆ ಕಾರಣ ಸರಕಾರ ನೀಡಿರುವ ಪತ್ತ.
ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ಗಳನ್ನು ಹೊಸದಾಗಿ ರಚಿಸುವುದಾಗಿ ಮತ್ತು ವಾರ್ಡ್ ಮೀಸಲಾತಿಯನ್ನು ಹೊಸದಾಗಿ ನಿಗದಿಪಡಿಸುವುದಾಗಿ ಸರಕಾರ ಕೋರ್ಟ್ ಗೆ ಮುಚ್ಚಳಿಕೆ ಬರೆದು ಕೊಟ್ಟಿದೆ. ಇದರಿಂದಾಗಿ ಹೊಸದಾಗಿ ಮೀಸಲಾತಿ ನಿಗದಿಪಡಿಸಬೇಕಿದೆ. ಮತ್ತು ಆ ನಂತರವೇ ಚುನಾವಣೆ ಘೋಷಣೆಯಾಗಬೇಕಿದೆ.
ಈಗಾಗಲೆ ಭಾರಿ ವಿಳಂಬವಾಗಿರುವುದರಿಂದ ಶೀಘ್ರವೇ ಹೊಸ ಮೀಸಲಾತಿ ಮತ್ತ ಚುನಾವಣೆ ದಿನ ನಿಗದಿಯಾಗಬಹುದು.
15 ಕ್ಷೇತ್ರಗಳ ಉಪಚುನಾವಣೆಗೆ ತಡೆ -ನಿಜವಾದ ಪ್ರಗತಿವಾಹಿನಿ ವರದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ