ಕೆಎಲ್ ಎಸ್ ಜಿಐಟಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಸೆಂಟರ್ ಆಫ್ ಕಾಂಪಿಟೆನ್ಸ್ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶನಿವಾರ ಆಗಸ್ಟ್ ೨೪, ೨೦೨೪ ರಂದು, ಕೆ. ಎಲ್. ಎಸ್. ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಡೆಸಿಬೆಲ್ಸ್ ಲ್ಯಾಬ್ ಸಹಯೋಗದಲ್ಲಿ ಸ್ಥಾಪಿಸಲಾದ ಎಲೆಕ್ಟ್ರಿಕ್ ವೆಹಿಕಲ್ ಸೆಂಟರ್ ಆಫ್ ಕಾಂಪಿಟೆನ್ಸ್ ನ್ನು ಪುಣೆಯ ಆಟೋಮೊಬೈಲ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಜನರಲ್ ಮ್ಯಾನೇಜರ್ ರಾಹುಲ್ ಮಹೀಂದ್ರಕರ್ ಅವರು ಉದ್ಘಾಟಿಸಿದರು.
ಗೌರವ ಅತಿಥಿಗಳಾಗಿ ಓಲಾ ಎಲೆಕ್ಟ್ರಿಕ್ ಬೆಂಗಳೂರು ಉಪ ಮುಖ್ಯ ಇಂಜಿನಿಯರ್ ಪ್ರದೀಪ್ ಚಂದ್ರಶೇಖರನ್, ಡೆಸಿಬಲ್ಸ್ ಲ್ಯಾಬ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಯೋಜನಾ ನಿರ್ದೇಶಕ ಸೂರಜ್ ಎಸ್. ಡಿ, ಹಾಗೂ ಅಲ್ಟ್ರಾ ಟೈಲ್ಸ್ನ ಮಾಲಿಕ, ಸಾಯಿ ರುಕ್ಮಿಣಿ ಎಂಟರ್ಪ್ರೈಸಸ್, ಬೆಂಗಳೂರು, 1991 ರ ಇ & ಇ ಬ್ಯಾಚ್ ವಿದ್ಯಾರ್ಥಿ ದಿನೇಶ್ ಶೆಟ್ಟಿ ಸಹ ಇತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡೆಸಿಬಲ್ಸ್ ಲ್ಯಾಬ್ ಬೆಂಗಳೂರು ಮತ್ತು ಜಿ. ಅಯ್. ಟಿ. ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು. ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಜಿ. ಅಯ್. ಟಿ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರದೀಪ್ ಚಂದ್ರಶೇಖರನ್, ದಿನೇಶ್ ಶೆಟ್ಟಿ, ರಾಹುಲ್ ಮಹೇಂದ್ರಕರ್, ಪ್ರೊ. ರಾಹುಲ್ ಸೂರ್ಯವಂಶಿ, ಪ್ರೊ. ಸತೀಶ ದೊಡ್ಮನಿ, ಪ್ರೊ. ಅವಿನಾಶ ದೇಶಪಾಂಡೆ, ವಿಭಾಗದ ಮುಖ್ಯಸ್ಥ ಪ್ರೊ. ಪಿ. ವಿ. ದಾತಾರ್, ಡಾ. ಡಿ. ಬಿ. ಕುಲಕರ್ಣಿ, ಪ್ರಾಚಾರ್ಯ ಡಾ. ಎಂ. ಎಸ್. ಪಾಟೀಲ, ಪ್ರೊ. ಡಿ. ಎ. ಕುಲಕರ್ಣಿ, ಸೂರಜ್ ಎಸ್. ಡಿ. ಮತ್ತು ಡೆಸಿಬೆಲ್ಸ್ ಲ್ಯಾಬ್ನಿಂದ ನವೀನ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ