*ಬೇಡಿಕೆಗೆ ಸ್ಪಂದಿಸದಿದ್ದರೆ ‘ಮಹಾ ಸಿಎಂ’ ನಿವಾಸದೆದುರು ಧರಣಿ: MES ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಹಿತಿಗಳು ಮತ್ತು ಪತ್ರಕರ್ತರ ಚಳುವಳಿಯ ಪರಿಣಾಮ ಬೆಳಗಾವಿಯ ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು. 25 ವರ್ಷಗಳಾದರೂ ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ಉದಾಸೀನತೆ ತೋರುತ್ತಿದ್ದು, 15 ದಿನದೊಳಗಾಗಿ ಸ್ಪಂದನೆ ಸಿಗದಿದ್ದರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಗಡಿ ಸಮನ್ವಯ ಸಚಿವ ಶಂಭೂರಾಜ್ ದೇಸಾಯಿ ಮತ್ತು ಚಂದ್ರಕಾಂತ ಪಾಟೀಲ ಅವರ ನಿವಾಸದೆದುರು ಧರಣಿ ನಡೆಸುವ ನಿರ್ಣಯವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಕೈಗೊಂಡಿದೆ.
ಫೆಬ್ರವರಿಯಲ್ಲಿ ನಡೆದ ಸಭೆಯಲ್ಲಿ ಗಡಿ ಸಮನ್ವಯ ಸಚಿವ ಶಂಭೂರಾಜ್ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದಾಗ ನೀಡಿದ ಆಶ್ವಾಸನೆ ಕೂಡ ಪೂರ್ಣಗೊಂಡಿಲ್ಲ. ಗಡಿ ವಿವಾದ ವಿಚಾರಣೆಯ ವೇಳೆ ವಕಾಲತ್ತು ವಹಿಸುವ ವಕೀಲರ ಖರ್ಚುವೆಚ್ಚವನ್ನು ನೀಡಬೇಕು.
25 ವರ್ಷಗಳಾದರೂ ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ಉದಾಸೀನತೆ ತೋರುತ್ತಿದ್ದು, 15 ದಿನದೊಳಗಾಗಿ ಸ್ಪಂದನೆ ಸಿಗದಿದ್ದರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಗಡಿ ಸಮನ್ವಯ ಸಚಿವ ಶಂಭೂರಾಜ್ ದೇಸಾಯಿ ಮತ್ತು ಚಂದ್ರಕಾಂತ ಪಾಟೀಲ ಅವರ ನಿವಾಸದೆದುರು ಧರಣಿ ನಡೆಸುವ ನಿರ್ಣಯವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಕೈಗೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ