Belagavi NewsBelgaum NewsKannada NewsKarnataka NewsLatest

ಕುಡಿಯುವ ನೀರಿನ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ: ಹಿರೇಬಾಗೇವಾಡಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬುಧವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಹಿರೇಬಾಗೇವಾಡಿ ಅತ್ಯಂತ ಪ್ರಮುಖವಾದ ಗ್ರಾಮವಾಗಿದ್ದು, ಗ್ರಾಮಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರಲಾಗಿದೆ. ಮುಂದಿನ ದಿನಗಳಲ್ಲಿ ಮುರಾರ್ಜಿ ದೇಸಾಯಿ ಸನಿವಾಸ ಶಾಲೆ ಸೇರಿದಂತೆ ಅನೇಕ ಯೋಜನೆಗಳನ್ನು ಆರಂಭಿಸಲಾಗುವುದು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕಾರ್ಯೋನ್ಮುಖರಾಗಿದ್ದಾರೆ. ಎಲ್ಲರ ಸಹಕಾರವಿರಲಿ ಎಂದು ಚನ್ನರಾಜ ಹಟ್ಟಿಹೊಳಿ ಕೋರಿದರು.

Home add -Advt

ಈ ವೇಳೆ ಕಲ್ಲಯ್ಯ ಸ್ವಾಮಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಸಿ ಪಾಟೀಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪ ನಾಯ್ಕರ್, ಸರ್ವಸದಸ್ಯರು, ಸುರೇಶ್ ಇಟಗಿ, ಗೌಸಮೊದ್ದಿನ್ ಜಾಲಿಕೊಪ್ಪ, ಅನಿಲ ಪಾಟೀಲ, ಅಡಿವೇಶ್ ಇಟಗಿ, ರಾಜಣ್ಣ ಪಾಟೀಲ, ಅಬ್ದುಲ್ ಖತೀಬ್, ಶಿಪು ಹಳೇಮನಿ, ಪ್ರಕಾಶ ಜಪ್ತಿ, ಗಂಗಾಧರ್ ಅಗಸಿಮನಿ, ಮಹಾಂತೇಶ್ ಹಂಚಿನಮನಿ, ರವಿ ಗಾಣಗಿ, ನಿಂಗಪ್ಪ ತಳವಾರ, ಆನಂದ ಪಾಟೀಲ, ಅಡಿವೆಪ್ಪ ತೋಟಗಿ, ಆನಂದ ಪಾಟೀಲ, ಸಲೀಂ ಸತ್ತಿಗೇರಿ, ಎಂ.ಡಿ.ಮುಲ್ಲಾ, ಪುಂಡಲೀಕ್ ಕೆಳಗೇರಿ, ಅಪ್ಪುಶ್ ಬೆಟಗೇರಿ ರಘು ಪಾಟೀಲ, ಇಂಜಿನಿಯರ್, ಗುತ್ತಿಗೆದಾರರು ಉಪಸ್ಥಿತರಿದ್ದರು.

Related Articles

Back to top button