
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪುರಸ್ಕೃತರಾದ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರ ಅಭಿನಂದನಾ ಸಮಾರಂಭ ಆ.16ರಂದು ನಡೆಯಲಿದೆ.
ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಬೆಳಗಾವಿಯ ಚಂದ್ರಕಾಂತ ಕುಸನೂರ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಎಂ.ಕೆ. ಪಬ್ಲಿಸಿಟಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಮಾರಂಭಕ್ಕೆ ಹಿರಿಯ ಸಾಹಿತಿ ಪ್ರೊ. ಎಂ.ಎಸ್. ಇಂಚಲ ಚಾಲನೆ ನೀಡಲಿದ್ದು, ಹಿರಿಯ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ಪ್ರಾ. ಬಿ.ಎಸ್. ಗವಿಮಠ ಹಾಗೂ ಎಲ್.ಎಸ್. ಶಾಸ್ತ್ರಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಹಿರಿಯ ವಿದ್ವಾಂಸ ಡಾ. ಬಸವರಾಜ ಜಗಜಂಪಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಡಾ. ಸರಜೂ ಕಾಟ್ಕರ್ ಹಾಗೂ ಸುಮಾ ಕಾಟ್ಕರ್ ಉಪಸ್ಥಿತರಿರುವರು.
ಬೆಳಗಾವಿ ಚಂದ್ರಕಾಂತ ಕುಸನೂರ ಪ್ರತಿಷ್ಠಾನದ ಅಧ್ಯಕ್ಷ ರವಿ ಕೊಟರಗಸ್ತಿ ಸ್ವಾಗತಿಸಲಿದ್ದು, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಕಾರ್ಯದರ್ಶಿ ಆರ್.ಬಿ. ಕಟ್ಟಿ ಹಾಗೂ ಎಂ.ಕೆ. ಪಬ್ಲಿಸಿಟಿ ಮಾಲೀಕ ಎಂ.ಕೆ. ಜೈನಾಪುರ ಉಪಸ್ಥಿತರಿರುವರು.
ಸಾಹಿತ್ಯಾಸಕ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಕೋರಿದ್ದಾರೆ.



