Belagavi NewsBelgaum NewsKannada NewsKarnataka NewsLatestPolitics
ಕಂಗನಾ ವಿರುದ್ಧ ಹೇಳಿಕೆಗೆ ಡಾ.ಸೋನಾಲಿ ಸರ್ನೋಬತ್ ಖಂಡನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ವಿರುದ್ಧ ಶಿರೋಮಣಿ ಅಕಾಲಿದಳ (ಅಮೃತಸರ) ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮಾನ್ ನೀಡಿರುವ ಹೇಳಿಕೆಯನ್ನು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಖಂಡಿಸಿದ್ದಾರೆ.
ಮಾನ್ನ ಕಾಮೆಂಟ್ಗಳು ಒಪ್ಪುವಂತದ್ದಲ್ಲ ಮತ್ತು ಕೀಳುಮಟ್ಟದ್ದಾಗಿದೆ. ಅತ್ಯಾಚಾರದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಈ ರೀತಿ ಮಾತನಾಡುವುದು ಮತ್ತು ಸ್ವಾರ್ಥಕ್ಕಾಗಿ ಅವುಗಳನ್ನು ಬಳಸುವುದು ನಾಚಿಕೆಗೇಡಿನ ಸಂಗತಿ ಎಂದು ಸರ್ನೋಬತ್ ಹೇಳಿದರು.
“ಮಾನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತೇನೆ ಮತ್ತು ಮುಂದಿನ ದಿನಗಳಲ್ಲಿ ಅವರು ಇಂತಹ ಸಂವೇದನಾರಹಿತ ಕಾಮೆಂಟ್ಗಳನ್ನು ಮಾಡಬಾರದು. ಒಬ್ಬ ಮಹಿಳೆಯಾಗಿ, ನಾನು ಕಂಗನಾ ರಣಾವತ್ ಪರ ನಿಲ್ಲುತ್ತೇನೆ ಮತ್ತು ಇಂತಹ ಅವಹೇಳನಕಾರಿ ಭಾಷೆಯನ್ನು ಸಹಿಸುವುದಿಲ್ಲ” ಎಂದು ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ